ದಲಿತರ ಮೇಲಿನ ದೌರ್ಜನ್ಯ ವಿರುದ್ಧ ಜೂನ್ 30ರಂದು ರಾಜ್ಯಾದ್ಯಂತ ಪ್ರತಿಭಟನೆ - Mahanayaka

ದಲಿತರ ಮೇಲಿನ ದೌರ್ಜನ್ಯ ವಿರುದ್ಧ ಜೂನ್ 30ರಂದು ರಾಜ್ಯಾದ್ಯಂತ ಪ್ರತಿಭಟನೆ

dalith hakkugala samithi
28/06/2021


Provided by

ಬೆಂಗಳೂರು: ದಲಿತರ ಮೇಲೆ ರಾಜ್ಯಾದ್ಯಂತ ದೌರ್ಜನ್ಯ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಜೂ.30ರಂದು ರಾಜ್ಯಾದ್ಯಂತ ಹೋರಾಟಕ್ಕೆ ದಲಿತ ಹಕ್ಕುಗಳ ಸಮಿತಿ(ಡಿಎಚ್ ಎಸ್) ಕರೆ ನೀಡಿದೆ.

ದಲಿತರ ಮೇಲಿನ ದೌರ್ಜನ್ಯವನ್ನು ತಡೆಯದ, ಅವರಿಗೆ ರಕ್ಷಣೆ ನೀಡದ ರಾಜ್ಯ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಕೊಪ್ಪಳದ ಬರಗೂರು, ವಿಜಯಪುರದ ದೇವರ ಹಿಪ್ಪರಗಿ, ಸಲದಹಳ್ಳಿ ಹತ್ಯೆ, ಕೊಪ್ಪಳ ಕ್ಷೌರ ನಿರಾಕರಣೆ, ಚಿಕ್ಕಮಗಳೂರಿನ ಗೋಣಿ ಬೀಡಿನಲ್ಲಿ ದಲಿತ ಯುವಕನ ಮೇಲಿನ ದೌರ್ಜನ್ಯ ಹೀಗೆ ನೂರಾರು ಪ್ರಕರಣ ನಡೆಯುತ್ತಿದ್ದರೂ ಸರ್ಕಾರ ದೌರ್ಜನ್ಯ ತಡೆಗೆ ಹಾಗೂ  ರಕ್ಷಣೆ ನೀಡಲು ಮುಂದಾಗುತ್ತಿಲ್ಲ ಎಂದು ಸಂಘಟನೆಯ ರಾಜ್ಯ ಸಂಚಾಲಕ ಗೋಪಾಲ ಕೃಷ್ಣ ಹರಳಹಳ್ಳಿ ತಿಳಿಸಿದ್ದಾರೆ.

ಕೊವಿಡ್ ಕಾಲದಲ್ಲಿಯೂ ಜಾತಿ ತಾರತಮ್ಯ ತಡೆಗಟ್ಟಲು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ