ದೆವ್ವ ಬಿಡಿಸುತ್ತೇವೆ ಅಂತ ಮಹಿಳೆಯರ ಕೈಕಾಲು ಕಟ್ಟಿ ಹಾಕಿ ಹೀನ ಕೃತ್ಯ | 30 ಮಂದಿ ಅರೆಸ್ಟ್ - Mahanayaka
5:24 AM Wednesday 15 - October 2025

ದೆವ್ವ ಬಿಡಿಸುತ್ತೇವೆ ಅಂತ ಮಹಿಳೆಯರ ಕೈಕಾಲು ಕಟ್ಟಿ ಹಾಕಿ ಹೀನ ಕೃತ್ಯ | 30 ಮಂದಿ ಅರೆಸ್ಟ್

prayagraj devva
28/06/2021

ಪ್ರಯಾಗ್ ರಾಜ್: ದೆವ್ವ ಬಿಡಿಸುವುದಾಗಿ ಮಹಿಳೆಯರ ಕೈಕಾಲುಗಳನ್ನು ಕಟ್ಟಿಹಾಕಿ ಮನಸೋ ಇಚ್ಛೆ ಚಾಟಿಯಿಂದ ಹೊಡೆದು ಅಮಾನವೀಯತೆ ತೋರಿದ ಹಿನ್ನೆಲೆಯಲ್ಲಿ  30 ಜನರನ್ನು ಬಂಧಿಸಲಾಗಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ನಡೆದಿದೆ.


Provided by

ಉತ್ತರ ಪ್ರದೇಶದ ಮಹೋಬಾ ಮತ್ತು ಛತ್ತರಪುರ ಗ್ರಾಮ ನಿವಾಸಿಗಳಾದ ಆರೋಪಿಗಳು ಮಹಿಳೆಯರಿಗೆ ದೆವ್ವ ಹಿಡಿದಿದೆ ಎಂದು ಕೈ ಕಾಲುಗಳನ್ನು ಕಟ್ಟಿ ಹಾಕಿ, ಕುಂಕುಮ , ನಿಂಬೆ ಹಣ್ಣು ಮೊದಲಾದ ಸಾಮಗ್ರಿಗಳನ್ನು ಹಿಡಿದು ಅವರ ದೇಹದಲ್ಲಿರುವ ದುಷ್ಟ ಶಕ್ತಿಯನ್ನು ಬಿಡಿಸುವುದಾಗಿ, ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಹೇಳಲಾಗಿದೆ.

ಇನ್ನೂ ಇವರ ದುಷ್ಟ ಕೆಲಸವನ್ನು ನೋಡಿದ ಕೆಲವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದರೂ, ಪೊಲೀಸರನ್ನು ಲೆಕ್ಕಿಸದೇ ಮಹಿಳೆಯರ ಮೇಲೆ ದೌರ್ಜನ್ಯ ಮುಂದುವರಿಸಿದ್ದಾರೆನ್ನಲಾಗಿದೆ. ಇದರಿಂದಾಗಿ ಪೊಲೀಸರು 30 ಜನರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ದೆವ್ವ ಬಿಡಿಸುವುದು ಮೊದಲಾದ ಆಚರಣೆಗಳ ಮೂಲಕ ಮಹಿಳೆಯರಿಗೆ ಕಿರುಕುಳ ನೀಡುವ ಮಂತ್ರವಾದಿಗಳಿಗೇನೂ ಕಡಿಮೆ ಇಲ್ಲ. ಗುಂಪಿನಲ್ಲಿದ್ದವರು ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು  ವರದಿಯಾಗಿದೆ.

ಇತ್ತೀಚಿನ ಸುದ್ದಿ