ತನ್ನ ಚಿಕ್ಕಮ್ಮನನ್ನೇ ವಿವಾಹವಾದ ಯುವಕ | ವಿವಾಹದ ವಿಡಿಯೋ ವೈರಲ್ - Mahanayaka

ತನ್ನ ಚಿಕ್ಕಮ್ಮನನ್ನೇ ವಿವಾಹವಾದ ಯುವಕ | ವಿವಾಹದ ವಿಡಿಯೋ ವೈರಲ್

chikkammana vivaha
29/06/2021


Provided by

ಬಿಹಾರ: ಯುವಕನೋರ್ವ ತನ್ನ ಚಿಕ್ಕಮ್ಮನನ್ನೇ ವಿವಾಹವಾದ ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿವಾಹದ ವಿಡಿಯೋ ವೈರಲ್ ಆಗಿದೆ.

ಇಬ್ಬರ ನಡುವೆ ಪ್ರೀತಿ ಆರಂಭವಾಗಿ ಫೋನ್ ನಲ್ಲಿ ಮಾತನಾಡುವವರೆಗೆ ಬಂದಿತ್ತು. ಫೋನ್ ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದ ಇವರಿಬ್ಬರು, ಮನೆಯಲ್ಲಿ ಯಾರೂ ಇಲ್ಲದ ದಿನ ನೋಡಿ ಮನೆಯಿಂದ ಪರಾರಿಯಾಗಿದ್ದು, ಅಜ್ಞಾತ ಸ್ಥಳವೊಂದರಲ್ಲಿ ವಿವಾಹವಾಗಿದ್ದು, ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಯುವಕ ಲಖಿಸರೈ ಮೂಲದವನಾಗಿದ್ದು, ಯುವತಿ ಜಮುಯಿಯ ಯುವತಿಯಾಗಿದ್ದಾಳೆ. ಸಂಬಂಧದ ಪ್ರಕಾರ ಯುವಕನಿಗೆ ಯುವತಿ ಚಿಕ್ಕಮ್ಮ ಆಗಬೇಕಿದ್ದಾಳೆ. ಆದರೆ, ಇವರಿಬ್ಬರು ಪರಸ್ಪರ ಇಷ್ಟಪಡಲು ಆರಂಭಿಸಿದ್ದು, ಹೀಗಾಗಿ ವಿವಾಹವಾಗಿದ್ದಾರೆ. ಇವರ ಸಂಬಂಧವನ್ನು ಮನೆಯವರು ಒಪ್ಪುವುದಿಲ್ಲ  ಎಂದು ಓಡಿ ಹೋಗಿ ವಿವಾಹವಾಗಿದ್ದಾರೆ.

ಇತ್ತೀಚಿನ ಸುದ್ದಿ