ಗೋವಿನ ಹೆಸರಿನಲ್ಲಿ ಹಿಂಸಾಕೃತ್ಯದಲ್ಲಿ ತೊಡಗುವವರು ಹಿಂದೂ ವಿರೋಧಿಗಳು | ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ - Mahanayaka
12:21 PM Saturday 17 - January 2026

ಗೋವಿನ ಹೆಸರಿನಲ್ಲಿ ಹಿಂಸಾಕೃತ್ಯದಲ್ಲಿ ತೊಡಗುವವರು ಹಿಂದೂ ವಿರೋಧಿಗಳು | ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್

bhagwat
04/07/2021

ನವದೆಹಲಿ: ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಹಿಂದೂಗಳು ಅಥವಾ ಮುಸ್ಲಿಮರ ಪ್ರಾಬಲ್ಯ ಸಾಧ್ಯವಿಲ್ಲ. ಇಲ್ಲಿ ಪ್ರಾಬಲ್ಯ ಏನಿದ್ದರೂ ಭಾರತೀಯರದ್ದು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ಗಾಜಿಯಾಬಾದ್ ನಲ್ಲಿ  ಡಾ.ಖವಾಜಾ ಇಫ್ತಿಕರ್ ಅಹ್ಮದ್ ಅವರ ‘ದಿ ಮೀಟಿಂಗ್ಸ್ ಆಫ್ಸ್ ಮೈಂಡ್ಸ್: ಎ ಬ್ರಿಡ್ಜಿಂಗ್ ಇನಿಶಿಯೇಟಿವ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವತ್ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಆರೆಸ್ಸೆಸ್ ಪರ ಸಂಘಟನೆ ಮುಸ್ಲಿಮ್ ರಾಷ್ಟ್ರೀಯ ಮಂಚ್ ಆಯೋಜಿಸಿತ್ತು.

ಮುಸ್ಲಿಮ್ ಧರ್ಮೀಯರು ಇಲ್ಲಿ ವಾಸಿಸಬಾರದು ಎಂದು ಹಿಂದೂ ಧರ್ಮೀಯನೊಬ್ಬ ಹೇಳಿದರೆ, ಆ  ವ್ಯಕ್ತಿ ನಿಜವಾಗಿಯೂ ಹಿಂದೂ ಅಲ್ಲ. ಗೋವು ಪವಿತ್ರ ಪ್ರಾಣಿ ನಿಜ. ಆದರೆ ಅದರ ಹೆಸರಿನಲ್ಲಿ ಹಿಂಸಾತ್ಮಕ ಕೃತ್ಯ ಪಾಲ್ಗೊಳ್ಳುವವರು ಹಿಂದೂ ವಿರೋಧಿಗಳೇ ಆಗಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.

ನಾವು ಕಳೆದ 40 ಸಾವಿರ ವರ್ಷಗಳಿಂದಲೂ ಒಂದೇ ಪೂರ್ವಜರ ವಂಶಸ್ಥರು. ಭಾರತದ ಜನರು ಒಂದೇ ಡಿಎನ್ ಎ ಹೊಂದಿದ್ದಾರೆ.  ರಾಜಕೀಯವು ಜನರನ್ನು ಒಂದು ಗೂಡಿಸಲು ಸಾಧ್ಯವಿಲ್ಲ. ಆದರೆ ಅದು ಏಕತೆಯನ್ನು ವಿರೂಪಗೊಳಿಸುವ ಅಸ್ತ್ರವಾಗಬಹುದು ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ