ಜಿ.ಪಂ., ತಾ.ಪಂ. ಚುನಾವಣೆ: ರಾಜ್ಯದಲ್ಲಿ ಆರಂಭವಾಗಿದೆ ರಾಜಕೀಯ ಚಟುವಟಿಕೆ - Mahanayaka

ಜಿ.ಪಂ., ತಾ.ಪಂ. ಚುನಾವಣೆ: ರಾಜ್ಯದಲ್ಲಿ ಆರಂಭವಾಗಿದೆ ರಾಜಕೀಯ ಚಟುವಟಿಕೆ

election
05/07/2021


Provided by

ಬೆಂಗಳೂರು: ಜಿಲ್ಲಾ ಪಂಚಾಯತ್ ಹಾಗೂ ತಾಲೂಕಿ ಪಂಚಾಯತ್ ಚುನಾವಣೆ ಅಕ್ಟೋಬರ್ ಅಥವ ನವೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದ್ದು, ಈಗಾಗಲೇ  ರಾಜ್ಯದ ರಾಜಕೀಯ ಪಕ್ಷಗಳು ಚುನಾವಣಾ ಚಟುವಟಿಕೆಯಲ್ಲಿ ತೊಡಗಿವೆ.

ಸಾಂಕ್ರಾಮಿಕ ರೋಗದಿಂದಾಗಿ  ಚುನಾವಣೆ 6 ತಿಂಗಳುಗಳ ಕಾಲು ಮುಂದೂಡುವಂತೆ ಸರ್ಕಾರ ಮನವಿ ಮಾಡಿಕೊಂಡಿತ್ತು. ಕ್ಷೇತ್ರ ಪುನರ್ ವಿಂಗಡನೆ, ಮೀಸಲಾತಿ ಮೊದಲಾದ ಕಾರಣಗಳಿಂದ ಚುನಾವಣೆ ತಡವಾಗಿದ್ದು, ಅಕ್ಟೋಬರ್ ಇಲ್ಲವೇ ನವೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಜಿ.ಪಂ., ತಾ.ಪಂ.  ಕ್ಷೇತ್ರಗಳಿಗೆ  ಮೀಸಲಾತಿ ಕರಡು ಕೂಡ ಪ್ರಕಟಿಸಲಾಗಿದೆ. ಈ ಮೂಲಕ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈಗಾಗಲೇ ಚುನಾವಣೆಗೆ ತಯಾರಾಗಿದೆ.

ವಿಧಾನಸಭೆ, ಲೋಕಸಭೆ ಚುನಾವಣೆ ಗೆಲ್ಲಲು ಜಿ.ಪಂ., ತಾ.ಪಂ. ಚುನಾವಣೆ ದಿಕ್ಸೂಚಿ ಇದ್ದಂತೆ. ಹಾಗಾಗಿ ದೂರ ದೃಷ್ಟಿಯಿಂದ ರಾಜ್ಯದ ಎಲ್ಲ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸಲಿವೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ