ಕುಡಿಯಲು ಹಣ ನೀಡದ ತಾಯಿಯನ್ನು ಹೊಡೆದು ಕೊಂದ ಪಾಪಿ ಮಗ! - Mahanayaka

ಕುಡಿಯಲು ಹಣ ನೀಡದ ತಾಯಿಯನ್ನು ಹೊಡೆದು ಕೊಂದ ಪಾಪಿ ಮಗ!

rathnamma lokesha
09/07/2021


Provided by

ಚಿತ್ರದುರ್ಗ: ಕುಡಿಯಲು ಹಣ ನೀಡಲಿಲ್ಲ ಎಂದು ಪಾಪಿ ಪುತ್ರನೋರ್ವ ತನ್ನ ತಾಯಿಯನ್ನೇ ಹೊಡೆದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ನಡೆದಿದೆ.

45 ವರ್ಷ ವಯಸ್ಸಿನ ರತ್ನಮ್ಮ ತನ್ನ 22 ವರ್ಷ ವಯಸ್ಸಿನ ಮಗ ಲೋಕೇಶ್ ನಿಂದಲೇ ಹತ್ಯೆಯಾಗಿದ್ದಾರೆ.   ಕುಡಿತದ ಅಮಲಿನಲ್ಲಿ ಆರೋಪಿ ಲೋಕೇಶ್ ಮನೆಗೆ ಆಗಮಿಸಿದ್ದು, ಊಟದ ವಿಚಾರವಾಗಿ ಜಗಳವಾಡಿದ್ದು, ಬಳಿಕ ಮದ್ಯ ಸೇವನೆಗೆ ಹಣ ನೀಡುವಂತೆ ತಾಯಿಯನ್ನು ಪೀಡಿಸಿದ್ದಾನೆ ಎನ್ನಲಾಗಿದೆ.

ಪ್ರತೀ ದಿನ ಈತನಿಗೆ ಹಣ ನೀಡಿ ಬೇಸತ್ತು ಹೋಗಿದ್ದ ತಾಯಿ ಮಗನ ಜೊತೆಗೆ ಈ ವಿಚಾರವಾಗಿ ಜಗಳವಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ತಾಯಿ ಎಂದೂ ನೋಡದೇ ಲೋಕೇಶ್ ಬಲವಾಗಿ ರತ್ನಮ್ಮಳ ಕೆನ್ನೆಗೆ ಬಾರಿಸಿದ್ದು, ಈ ಏಟಿನ ರಭಸಕ್ಕೆ ತಾಯಿ ರತ್ನಮ್ಮ ಕಬ್ಬಿಣದ ಬಾಗಿಲಿಗೆ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಮೊಳಕಾಲ್ಮೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆರೋಪಿ ಲೋಕೇಶನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ