ಡಿ.ಕೆ.ಶಿವಕುಮಾರ್  ಕೈಯಿಂದ ಪೆಟ್ಟು ತಿಂದ ವ್ಯಕ್ತಿ ಹೇಳಿದ್ದೇನು ಗೊತ್ತಾ? - Mahanayaka

ಡಿ.ಕೆ.ಶಿವಕುಮಾರ್  ಕೈಯಿಂದ ಪೆಟ್ಟು ತಿಂದ ವ್ಯಕ್ತಿ ಹೇಳಿದ್ದೇನು ಗೊತ್ತಾ?

dk shivakumar umesha
10/07/2021


Provided by

ಮಂಡ್ಯ: ಫೋಟೋ ತೆಗೆಸಿಕೊಳ್ಳಲು ಹೋಗಿ ಡಿ.ಕೆ.ಶಿವಕುಮಾರ್ ಅವರಿಂದ ಪೆಟ್ಟು ತಿಂದ ವ್ಯಕ್ತಿ, ಡಿ.ಕೆ.ಶಿವಕುಮಾರ್ ಅವರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದು, “ನಾನು ಡಿ.ಕೆ.ಶಿವಕುಮಾರ್ ಅವರ ಹೆಗಲ ಮೇಲೆ ಕೈ ಹಾಕುವಷ್ಟು ಸಣ್ಣ ವ್ಯಕ್ತಿ ಅಲ್ಲ, ಅವರ ವರ್ತನೆಯಿಂದ ನನಗೆ ಬೇಸರ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಂದ ಪೆಟ್ಟು ತಿಂದ ವ್ಯಕ್ತಿ ಉಮೇಶ್ ಎಂಬವರಾಗಿದ್ದು, ಈ ಘಟನೆಯ ಬಳಿಕ ಅವರು ನೋವು ತೋಡಿಕೊಂಡಿದ್ದಾರೆ. ಇನ್ನೂ ಉಮೇಶ್ ಎಂಬ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನೇ ಅಲ್ಲ ಎಂದು ಅವರು ಹೇಳಿದ್ದು, ತಾನು ಜೆಡಿಎಸ್ ಕಾರ್ಯಕರ್ತನಾಗಿದ್ದು, ಡಿ.ಕೆ.ಶಿವಕುಮಾರ್ ಅವರು ಬಂದಾಗ ಅಭಿಮಾನದಿಂದ ಹೋಗಿದ್ದೆ. ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳಬೇಕು ಎಂದು ತೆರಳಿದ ವೇಳೆ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದು, ಈ ಘಟನೆ ತನಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಡಿ.ಕೆ.ಶಿವಕುಮಾರ್ ಅವರನ್ನು ನೋಡಿದಾಗ ಅಭಿಮಾನ, ಪ್ರೀತಿ ಹೆಚ್ಚಿತ್ತು. ಈ ವೇಳೆ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳಬೇಕು ಅಂದುಕೊಂಡೆ. ಅವರ ಹಿಂದೆ ಕೈ ಹಿಡಲು ಹೋದೆ. ಅಷ್ಟಕ್ಕೆ ಅವರು ನನಗೆ ಹಲ್ಲೆ ಮಾಡಿದರು. ಅವರು ಕೈ ಮಾಡಿದ್ದು ಸರಿಯಲ್ಲ, ಅವರ ಹೆಗಲ ಮೇಲೆ ಕೈ ಹಾಕುವಷ್ಟು ಸಣ್ಣ ವ್ಯಕ್ತಿ ನಾನಲ್ಲ ಎಂದು ಉಮೇಶ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ