ಯುವಕನ ದವಡೆಯಲ್ಲಿತ್ತು ಬರೋಬ್ಬರಿ 82 ಹಲ್ಲುಗಳು! - Mahanayaka

ಯುವಕನ ದವಡೆಯಲ್ಲಿತ್ತು ಬರೋಬ್ಬರಿ 82 ಹಲ್ಲುಗಳು!

82 teeth
14/07/2021

ಪಾಟ್ನಾ: ವ್ಯಕ್ತಿಯೋರ್ವನ ದವಡೆಯಲ್ಲಿ ಬರೋಬ್ಬರಿ 82 ಹಲ್ಲುಗಗಳಿದ್ದು, ಇದು ವೈದ್ಯಲೋಕಕ್ಕೆ ಒಂದು ಸವಾಲಾಗಿತ್ತು. ಇದೀಗ ಈ ಅನಗತ್ಯ ಹಲ್ಲುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಹೊರ ತೆಗೆದಿದ್ದಾರೆ.

ಒಬ್ಬ ವ್ಯಕ್ತಿಗೆ ಸಾಮಾನ್ಯವಾಗಿ 32 ಹಲ್ಲುಗಳಿರುತ್ತವೆ. ಅಪ್ಪಿತಪ್ಪಿ ಕೆಲವರಲ್ಲಿ  ಅದಕ್ಕೂ ಅಧಿಕವಾಗಿ ಹಲ್ಲಿದ್ದರೆ 35ರಷ್ಟು ಇರಬಹುದು. ಆದರೆ, ಬಿಹಾರದ ಈ 17 ವರ್ಷ ವಯಸ್ಸಿನ ಯುವಕ ನಿತೀಶ್ ಕುಮಾರ್ ನ  ದವಡೆಯಲ್ಲಿ 82 ಹಲ್ಲುಗಳಿದ್ದವು.

ನಿತೀಶ್  5 ವರ್ಷಗಳಿಂದ ದವಡೆಯ ಗೆಡ್ಡೆಯಾದ ಒಡೊಂಟೊಮಾದಿಂದ ಬಳಲುತ್ತಿದ್ದರು. ಸರಾಸರಿ ವಯಸ್ಕನ ಹಲ್ಲುಗಳಿಗಿಂತ 50 ಹಲ್ಲುಗಳು ಹೆಚ್ಚು ಅಂದ್ರೆ ಒಟ್ಟು 82 ಹಲ್ಲುಗಳನ್ನು ಹೊಂದಿರಿಂದ ಅವರ ಮುಖ ಕೂಡ ವಿರೂಪವಾಗಿ ಕಾಣಿಸುತ್ತಿತ್ತು.


Provided by

ನಿತೀಶ್ ಕೆಲವು ವರ್ಷಗಳಿಂದ ಸರಿಯಾಗಿ ಚಿಕಿತ್ಸೆ ಕೂಡ ಪಡೆಯದೇ ಇದ್ದುದರಿಂದ ಈ ಸಮಸ್ಯೆ ಉಲ್ಬಣಗೊಂಡಿತ್ತು. ಡವಡೆಯ ಕೆಳಗೆ ಹಲ್ಲುಗಳು ಉಂಡೆಯಂತಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಸ್ಕ್ಯಾನಿಂಗ್ ಮಾಡಿ ನೋಡಿದಾಗ 82 ಹಲ್ಲುಗಳಿರುವುದು ಪತ್ತೆಯಾಗಿತ್ತು.

ಇದೀಗ ಯುವಕನಿಗೆ ಡಾ. ಪ್ರಿಯಾಂಕರ್ ಸಿಂಗ್ ಹಾಗೂ ಡಾ.ಜಾವೇದ್ ಇಕ್ಬಾಲ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ವಿಚಿತ್ರ ಕೇಸ್ ವೈದ್ಯರಿಗೆ ಒಂದು ಸವಾಲು ಕೂಡ ಆಗಿತ್ತು.

ಇನ್ನಷ್ಟು ಸುದ್ದಿಗಳು:

ಕಾಫಿ ಪ್ರಿಯರಿಗೆ ಸಿಹಿ ಸುದ್ದಿ: ಕಾಫಿ ಕುಡಿಯುವುದರಿಂದಾಗುವ ಪ್ರಯೋಜನಗಳೇನು?

ಬ್ಯಾಂಕ್ ಗ್ರಾಹಕರೇ ಎಚ್ಚರ! | ಸ್ವಲ್ಪ ಯಾಮಾರಿದರೂ ನಿಮ್ಮ ಹಣ ಕಂಡವರ ಪಾಲಾಗಬಹುದು!

“ಬೀಸ್ಟ್” ಇಳೆಯದಳಪತಿ ವಿಜಯ್ ಅವರ 65ನೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಕೊರೊನಾ ಮುಕ್ತ ಗ್ರಾಮ ಸ್ಪರ್ಧೆ | ವಿಜೇತ ಗ್ರಾಮಗಳಿಗೆ 50 ಲಕ್ಷ ರೂ. ಬಹುಮಾನ!

 

ಇತ್ತೀಚಿನ ಸುದ್ದಿ