ದಲಿತ ಸಪ್ಲೈಯರ್ ಮೇಲೆ ನಟ ದರ್ಶನ್ & ಗ್ಯಾಂಗ್ ಹಲ್ಲೆ: ತನಿಖೆಗೆ ಆದೇಶ ನೀಡಿದ ಗೃಹ ಸಚಿವ ಬೊಮ್ಮಾಯಿ - Mahanayaka

ದಲಿತ ಸಪ್ಲೈಯರ್ ಮೇಲೆ ನಟ ದರ್ಶನ್ & ಗ್ಯಾಂಗ್ ಹಲ್ಲೆ: ತನಿಖೆಗೆ ಆದೇಶ ನೀಡಿದ ಗೃಹ ಸಚಿವ ಬೊಮ್ಮಾಯಿ

darshan
15/07/2021


Provided by

ಬೆಂಗಳೂರು: ಮೈಸೂರಿನ ಹೊಟೇಲೊಂದರಲ್ಲಿ  ದಲಿತ ಸಪ್ಲೈಯರ್ ಮೇಲೆ ದರ್ಶನ್ ಹಾಗೂ ಗ್ಯಾಂಗ್ ನಡೆಸಿದ ಹಲ್ಲೆಯಿಂದ ಆತನ ದೃಷ್ಟಿಯೇ ಮಂಜಾಗಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ,  ಪ್ರಕರಣವನ್ನು ತನಿಖೆ ನಡೆಸುವಂತೆ ಮೈಸೂರು ಕಮಿಷನರ್ ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆದೇಶ ನೀಡಿದ್ದಾರೆ.

ನಟ ದರ್ಶನ್ ಹಾಗೂ  ಗ್ಯಾಂಗ್ ಹೊಟೇಲ್ ನಲ್ಲಿ ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದು, ಈ ಪ್ರಕರಣ ತನಿಖೆ ನಡೆಸುವಂತೆ ಇಂದ್ರಜಿತ್ ಲಂಕೇಶ್ ಅವರು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ ಬೆನ್ನಲ್ಲೇ ಇದೀಗ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.

ಹಲ್ಲೆ ನಡೆದ ಮಾರನೆ ದಿನ ಸಪ್ಲೈಯರ್ ಪತ್ನಿ ಪೊರಕೆ ಹಿಡಿದು ಹೊಡೆಯಲು ಬಂದಿದ್ದಾಳೆ. ಆದರೆ, ಪ್ರಕರಣವನ್ನು ಮೈಸೂರು ಪೊಲೀಸ್ ಠಾಣೆಯಲ್ಲಿಯೇ ಸೆಟಲ್ ಮೆಂಟ್ ಮಾಡಿ ಎಲ್ಲರನ್ನೂ ಕಳುಹಿಸಲಾಗಿದೆ ಎಂದು ಇಂದ್ರಜಿತ್ ಗಂಭೀರ ಆರೋಪ ಮಾಡಿದ್ದಾರೆ.

ವಂಚನೆ ಪ್ರಕರಣದಲ್ಲಿ ದರ್ಶನ್ ಮಹಿಳೆಯೊಬ್ಬರನ್ನು ಬಳಸಿಕೊಂಡರು. ಈಗ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಪೊಲೀಸರು ಕಣ್ಣುಮುಚ್ಚಿಕೊಂಡು ಸೆಟಲ್ ಮೆಂಟ್ ಮಾಡಿ ಕಳುಹಿಸುವ ಮಟ್ಟಕ್ಕೆ ಕಾನೂನು ಬಂದಿದೆಯೇ ಎಂದು ಲಂಕೇಶ್ ಪ್ರಶ್ನಿಸಿದ್ದಾರೆ.

ಇಂತಹ ಘಟನೆಗಳ ಬಳಿಕ ಮಾಧ್ಯಮಗಳ ಮುಂದೆ ಬೇರೆಯೇ ಕಥೆ ಕಟ್ಟುತ್ತಿದ್ದಾರೆ. ಇಂತಹ ಅನ್ಯಾಯಗಳನ್ನು ನೋಡುತ್ತಾ ಕೂರಲು ಸಾಧ್ಯವಿಲ್ಲ. ಅದಕ್ಕಾಗಿಯೇ ಗೃಹ ಸಚಿವರನ್ನು ಭೇಟಿಯಾಗಿ ತನಿಖೆಗೆ ಮನವಿ ಮಾಡಿದ್ದೇನೆ ಲಂಕೇಶ್ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು

ನಟ ದರ್ಶನ್  ಅರುಣ ಕುಮಾರಿಗೆ  ಕಿರುಕುಳ ನೀಡಿದ್ದಾರೆ, ದಲಿತ ಯುವಕನಿಗೆ ಹಲ್ಲೆ ನಡೆಸಿದ್ದಾರೆ | ಇಂದ್ರಜಿತ್ ಗಂಭೀರ ಆರೋಪ

“ರೆಕ್ಕೆಯನ್ನಲ್ಲ, ತಲೆಯನ್ನೇ ತೆಗೆಯುತ್ತೇನೆ” | ನಟ ದರ್ಶನ್ ಗರಂ

“ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ” ಎಂದು ದರ್ಶನ್ ಪ್ರಕರಣದಲ್ಲಿ ಉಮಾಪತಿ ಹೀಗೆ ಹೇಳಿದ್ದೇಕೆ?

ಚಪ್ಪಲಿ ಇಲ್ಲದೇ ಹೀರೋಯಿನ್ ಮನೆಯಲ್ಲಿ ಪೊಲೀಸರ ಎದುರು ನಿಂತಾಗ ದರ್ಶನ್ ನ ಸಪೋರ್ಟ್ ಗೆ ಯಾರು ಬಂದಿದ್ದರು |  ಜಗ್ಗೇಶ್ ಪ್ರಶ್ನೆ

 

ಇತ್ತೀಚಿನ ಸುದ್ದಿ