ಚರ್ಚ್ ಗೆ ಸೇರಿದ ಜಾಗದಲ್ಲಿ ಹಿಂದೂ ದಂಪತಿಯ ಅಂತ್ಯಕ್ರಿಯೆ | ಸಹೋದರತೆ ಸಾರಿದ ಚರ್ಚ್ - Mahanayaka

ಚರ್ಚ್ ಗೆ ಸೇರಿದ ಜಾಗದಲ್ಲಿ ಹಿಂದೂ ದಂಪತಿಯ ಅಂತ್ಯಕ್ರಿಯೆ | ಸಹೋದರತೆ ಸಾರಿದ ಚರ್ಚ್

kerala
15/07/2021

ತಿರುವನಂತಪುರಂ:  ಹಿಂದೂ ದಂಪತಿಯ ಶವಸಂಸ್ಕಾರ ನೆರವೇರಿಸಲು ಚರ್ಚ್ ನ ಜಾಗದಲ್ಲಿ ಅವಕಾಶ ಮಾಡಿಕೊಡುವ ಮೂಲಕ ಕೇರಳದ ಅಲಪ್ಪುಳ ಜಿಲ್ಲೆಯ ಎಡತ್ವಾ ಗ್ರಾಮದಲ್ಲಿನ ಸೇಂಟ್‌ ಜಾರ್ಜ್‌ ಫೋರೆನ್ಸ್‌ ಚರ್ಚ್ ಭಾವೈಕ್ಯದ ಸಂದೇಶ ಸಾರಿದೆ.


Provided by

 80 ವರ್ಷ ವಯಸ್ಸಿನ  ಶ್ರೀನಿವಾಸನ್‌  ಅವರು ಕಳೆದ ತಿಂಗಳು ಕೊವಿಡ್ ನಿಂದ ಮೃತಪಟ್ಟಿದ್ದು,  ಅವರ ಅಂತ್ಯಕ್ರಿಯೆಯನ್ನು  ಸೇಂಟ್‌ ಜಾರ್ಜ್‌ ಫೋರೆನ್ಸ್‌ ಚರ್ಚ್‌ಗೆ ಸೇರಿದ ಸ್ಮಶಾನದಲ್ಲಿ ನೆರವೇರಿಸಲಾಗಿತ್ತು. ಇದರ ಬೆನ್ನಲ್ಲೇ ಶ್ರೀನಿವಾಸ್ ಅವರ ಪತ್ನಿ ಕೃಷ್ಣವೇಣಿ ಅವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯನ್ನು  ಕೂಡ ಚರ್ಚ್ ನ ಸ್ಥಳದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಚರ್ಚ್  ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದರೂ, ಹಿಂದೂ ಧರ್ಮದ ವಿಧಿವಿಧಾನದ ಪ್ರಕಾರವೇ ಅಂತ್ಯಕ್ರಿಯೆಗೆ ಚರ್ಚ್ ಅವಕಾಶ ಮಾಡಿಕೊಡುವ ಮೂಲಕ ಇತರ ಧರ್ಮಗಳೊಂದಿಗಿನ ಸೌಹಾರ್ದವನ್ನು ಎತ್ತಿ ಹಿಡಿದೆ.

ದಂಪತಿಗಳಿಗೆ ಸ್ವಂತ ಜಮೀನಿ ಇರಲಿಲ್ಲ. ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ. ಇದರಿಂದಾಗಿ ಎಡತ್ವಾ ಗ್ರಾಪಂ ಚರ್ಚ್ ಗೆ ಮನವಿ ಮಾಡಿದ್ದು, ಚರ್ಚ್ ನವರು ತಕ್ಷಣವೇ ಅಂತ್ಯಕ್ರಿಯೆ ನಡೆಸಲು ಸಮ್ಮತಿ ಸೂಚಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇನ್ನೂ ಇದೇ ಮೊದಲ ಬಾರಿಗೆ ಚರ್ಚ್ ನ ಸ್ಮಶಾನದಲ್ಲಿ ಇತರ ಧರ್ಮದವರ ಅಂತ್ಯಕ್ರಿಯೆ ನಡೆಸಲಾಗಿದೆ. ಚರ್ಚ್ ನ ಕಾರ್ಯಕ್ಕೆ ಯಾರು ಕೂಡ ಆಕ್ಷೇಪ ವ್ಯಕ್ತಪಡಿಸದೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸುದ್ದಿಗಳು:

“ನೀನು ಹಿಂದೂ ಅಲ್ಲ, ಹೊರಗೆ ಹೋಗು ಕ್ರೈಸ್ತ ಯುವಕನಿಗೆ ತಾಕೀತು” | ಸಚಿವ ಅಂಗಾರರ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ?

ಗ್ರಾಮ ಪಂಚಾಯತ್ ಮುಂದೆಯೇ ಅಂತ್ಯಸಂಸ್ಕಾರ ನಡೆಸಲು ಮುಂದಾದ ದಲಿತ ಕುಟುಂಬ!

ದಲಿತ ಬಾಲಕಿಗೆ ಮದ್ಯ ಕುಡಿಸಿ, ವಿವಸ್ತ್ರಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯ ಬಿಟ್ಟ ಪಾಪಿಗಳು!

ಸಿಎಂ ಯಡಿಯೂರಪ್ಪರ ಸ್ವಕ್ಷೇತ್ರದಲ್ಲಿಯೇ ದಲಿತರಿಗೆ ರಕ್ಷಣೆ ಇಲ್ಲ | ಸಾಮಾಜಿಕ ಬಹಿಷ್ಕಾರ, ಗುಂಪುಗಳಿಂದ ಹಲ್ಲೆ!

ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ