ಸಂಚಾರಿ ವಿಜಯ್ ಹುಟ್ಟು ಹಬ್ಬಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ‘ಮೇಲೊಬ್ಬ ಮಾಯಾವಿ’ ಚಿತ್ರ ತಂಡ - Mahanayaka
12:26 PM Tuesday 16 - September 2025

ಸಂಚಾರಿ ವಿಜಯ್ ಹುಟ್ಟು ಹಬ್ಬಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ‘ಮೇಲೊಬ್ಬ ಮಾಯಾವಿ’ ಚಿತ್ರ ತಂಡ

melobba mayavi
17/07/2021

ಸಿನಿ ಡೆಸ್ಕ್:  ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬದ ಪ್ರಯುಕ್ತ ‘ಮೇಲೊಬ್ಬ ಮಾಯಾವಿ’ ಚಿತ್ರ ತಂಡ ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಚಿತ್ರದಲ್ಲಿ ‘ಇರುವೆ’ ಎಂಬ ಹೆಸರಿನ ಪಾತ್ರದಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ.


Provided by

ಮೇಲೊಬ್ಬ ಮಾಯಾವಿ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಧೂಲೆಬ್ಬಿಸಿತ್ತು.  ಇದೀಗ ಪೋಸ್ಟರ್ ಕೂಡ ಸದ್ದು ಮಾಡುತ್ತಿದೆ. ವಿಭಿನ್ನ ಪೋಸ್ಟರ್ ತೀವ್ರ ಕುತೂಹಲವನ್ನು ಮೂಡಿಸಿದೆ.

ಸತ್ಯ ಕಥೆಯನ್ನು ಆಧರಿಸಿ ಬಿ.ನವೀನ್ ಕೃಷ್ಣ ಈ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀ ಕಟೀಲ್ ಸಿನಿಮಾಸ್ ಲಾಂಛನದಲ್ಲಿ ಭರತ್ ಹಾಗೂ ತನ್ವಿ ಅಮಿನ್ ಕೊಲ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ  ಎಲ್.ಎನ್.ಶಾಸ್ತ್ರಿ ಸಂಗೀತ ನೀಡಿದ್ದು,  ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ನೀಡಿದ್ದಾರೆ. ಕೆ.ಗಿರೀಶ್ ಕುಮಾರ್ ಸಂಕಲ ಹಾಗೂ ದೀಪಿತ್ ಬಿಜೈ ರತ್ನಾಕರ್ ಅವರ ಛಾಯಗ್ರಹಣವಿದೆ.

ಸರ್ಕಾರ ಚಿತ್ರಮಂದಿರಗಳಿಗೆ ಅವಕಾಶ ನೀಡಿದ ತಕ್ಷಣವೇ ಮೇಲೊಬ್ಬ ಮಾಯಾವಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಬಗ್ಗೆ ಸಂಚಾರಿ ವಿಜಯ್ ಅವರು ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಆದರೆ, ಅವರ ಮರಣದ ಬಳಿಕ ಇದೀಗ ಚಿತ್ರ ತೆರೆಗೆ ಬರಲಿದೆ.

ಇನ್ನಷ್ಟು ಸುದ್ದಿಗಳು…

ಅಗಲಿದ ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ: ವ್ಯಾಪಕ ಆಕ್ರೋಶ

6 ತಿಂಗಳ ಹಿಂದೆ ಬಾಲಕನ ಪ್ರಾಣ ಉಳಿಸಿದ್ದ ಸಂಚಾರಿ ವಿಜಯ್

ಇಬ್ಬರ ಬಾಳಿಗೆ ಬೆಳಕಾದ ಸಂಚಾರಿ ವಿಜಯ್: ಮಹಿಳೆಗೆ ಕಿಡ್ನಿ ಕಸಿ ಯಶಸ್ವಿ

ಜಾತಿ ವ್ಯವಸ್ಥೆಯ ನೋವು, ಅವಮಾನವನ್ನು ಸಂಚಾರಿ ವಿಜಯ್ ಅನುಭವಿಸಿದ್ದು ನಿಜ | ನೀನಾಸಂ ಸತೀಶ್

ಜಾತಿ ವ್ಯವಸ್ಥೆಯ ನೋವು, ಅವಮಾನವನ್ನು ಸಂಚಾರಿ ವಿಜಯ್ ಅನುಭವಿಸಿದ್ದು ನಿಜ | ನೀನಾಸಂ ಸತೀಶ್

ಇತ್ತೀಚಿನ ಸುದ್ದಿ