ಬಸ್ ನಿಲ್ದಾಣದಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ, ಬರ್ಬರ ಹತ್ಯೆ - Mahanayaka
12:05 PM Wednesday 21 - January 2026

ಬಸ್ ನಿಲ್ದಾಣದಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ, ಬರ್ಬರ ಹತ್ಯೆ

kalaburgi news
20/07/2021

ಜೇವರ್ಗಿ: ಮಾನಸಿಕ ಅಸ್ವಸ್ಥ ವೃದ್ಧೆಯನ್ನು ಬಸ್ ನಿಲ್ದಾಣದಲ್ಲಿ ಅತ್ಯಾಚಾರ ನಡೆಸಿ ಹತ್ಯೆ  ಮಾಡಿದ ದಾರುಣ ಘಟನೆಯೊಂದು ಕಲಬುರ್ಗಿ ಜಿಲ್ಲೆಯ ಜೇವರ್ಗಿಯ ಗ್ರಾಮವೊಂದರಲ್ಲಿ ನಡೆದಿದೆ.

60 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ಮಹಿಳೆ, ಮನೆಯವರಿಂದ ಬೇರೆಯಾಗಿ,  ಬೀದಿ ಪಾಲಾಗಿದ್ದು,  ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ರಾತ್ರಿ ವೇಳೆ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದರು ಎಂದು ಮೃತರ ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ತಡ ರಾತ್ರಿ ಮಹಿಳೆಯ ಮೇಲೆ ಆರೋಪಿ ಅತ್ಯಾಚಾರ ನಡೆಸಿದ್ದು,  ವೃದ್ಧೆ ಕಿರುಚಾಟ ನಡೆಸಿದಾಗ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೇವರ್ಗಿ ಸಿಪಿಐ ಎಂ. ಶಿವಪ್ರಸಾದ್‌, ನೆಲೋಗಿ ಪಿಎಸ್‌ ಐ ರಾಜಕುಮಾರ ಜಾಮಗೊಂಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸರ್ಕಾರ ಮನಸು ಮಾಡಿದರೆ, ಆಶ್ರಯವಿಲ್ಲದೇ ರಸ್ತೆ ಬದಿ ಮಲಗುವವರನ್ನು ಗುರುತಿಸಿ, ಅವರಿಗೆ ಒಂದು ವಸತಿ ಸೌಲಭ್ಯ ನೀಡಿ ಮೂರು ಹೊತ್ತು ಊಟ ಹಾಕುವುದು ಒಂದು ದೊಡ್ಡ ಕೆಲಸವೇನಲ್ಲ. ಆದರೆ, ಸರ್ಕಾರದ ಇಚ್ಛಾ ಶಕ್ತಿಯ ಕೊರತೆಯಿಂದಾಗಿ ವೃದ್ಧೆಯರು ಕೂಡ ಅತ್ಯಾಚಾರಕ್ಕೊಳಪಟ್ಟು ಹತ್ಯೆಗೀಡಾಗುತ್ತಿರುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇದೆ.

ಇನ್ನಷ್ಟು ಸುದ್ದಿಗಳು…

ಪತಿವ್ರತೆ ಎಂದು ಸಾಬೀತು ಪಡಿಸಲು ಮಹಿಳೆಯನ್ನು ಕುದಿಯುವ ಎಣ್ಣೆಗೆ ಕೈ ಹಾಕಿಸಿದರು!

ಬಿಜೆಪಿ ಹೈಕಮಾಂಡ್ ಅಂಗಳ  ಸೇರಿತೇ “ಯಾರಿಗೂ ಹೇಳ್ಬೇಡಿ!” ಆಡಿಯೋ ?

“ನಾಯಕತ್ವ ಬದಲಾವಣೆ ಸಂಚಿನ ಸೂತ್ರದಾರನೇ ನಳಿನ್ ಕುಮಾರ್ ಕಟೀಲ್!”

ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ

ಇತ್ತೀಚಿನ ಸುದ್ದಿ