121 ಅಶ್ಲೀಲ ವಿಡಿಯೋಗಳನ್ನು 12 ಲಕ್ಷ ರೂ. ಮಾರಾಟ ಮಾಡಲು ಮುಂದಾಗಿದ್ದ ರಾಜ್ ಕುಂದ್ರಾ! - Mahanayaka
12:39 PM Thursday 21 - August 2025

121 ಅಶ್ಲೀಲ ವಿಡಿಯೋಗಳನ್ನು 12 ಲಕ್ಷ ರೂ. ಮಾರಾಟ ಮಾಡಲು ಮುಂದಾಗಿದ್ದ ರಾಜ್ ಕುಂದ್ರಾ!

raj kundra
24/07/2021


Provided by

ಮುಂಬೈ:  ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ 121 ವಿಡಿಯೋಗಳನ್ನು 12 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುವ ಡೀಲ್ ಮಾಡಿಕೊಂಡಿರುವ ವಿಚಾರವನ್ನು ಮುಂಬೈ ಪೊಲೀಸರು ಕೋರ್ಟ್ ನಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಅಶ್ಲೀಲ ಚಿತ್ರ ತಯಾರಿಕೆ ಮತ್ತು ಮಾರಾಟ, ಪ್ರಸಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ ಇದೀಗ ಪೊಲೀಸರ ವಶದಲ್ಲಿದ್ದಾನೆ. ರಾಜ್ ಕುಂದ್ರಾನ ವಾಟ್ಸಾಪ್ ಚಾಟ್ ನಲ್ಲಿ 121 ಅಶ್ಲೀಲ ಚಿತ್ರಗಳ ವಿಡಿಯೋಗಳನ್ನು 12 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾನೆ. ಈ ವಿಡಿಯೋದಿಂದ ಬಂದ ಹಣವನ್ನು ಆನ್ ಲೈನ್ ಬೆಟ್ಟಿಂಗ್ ಗೆ ಬಳಸಿಕೊಂಡಿದ್ದಾನೆ ಎನ್ನುವ ಅನುಮಾನವನ್ನು ಕೂಡ ಪೊಲೀಸರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

48 ಟಿವಿ ಡೇಟಾದ ಸ್ಯಾಂಡ್ ಬಾಕ್ಸ್ ಪೊಲೀಸರಿಗೆ ದೊರೆತಿದ್ದು, ಅದರಲ್ಲಿ ಪೂರ್ತಿ ಅಶ್ಲೀಲ ಚಿತ್ರಗಳೇ ತುಂಬಿದ್ದವು. ಹೀಗಾಗಿ  ರಾಜ್ ಕುಂದ್ರಾನನ್ನು ಇನ್ನೂ ಹೆಚ್ಚು ದಿನಗಳ ಕಾಲ ನಮ್ಮ ವಶಕ್ಕೆ ನೀಡಬೇಕು ಎಂದ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.  ಇನ್ನೂ 51 ವಿಡಿಯೋಗಳು ನಮಗೆ ದೊರೆತಿದೆ. ಇದರಲ್ಲಿ 35 ವಿಡಿಯೋಗಳು ಹಾಟ್ ಶಾಟ್ಸ್ ಆ್ಯಪ್ ನಲ್ಲಿ ಇದ್ದವು ಎಂದು ಪೊಲೀಸರು ತಿಳಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಅಮ್ಮ ಪ್ರತೀ ದಿನ ಜಗಳವಾಡುತ್ತಾಳೆ ಎಂದು ಕೊಂದ ಪುತ್ರ | ಹೆತ್ತವಳ ಕತ್ತು ಹಿಸುಕಿದ ಪುತ್ರ

ತಾಯಿಯ ಕಣ್ಣೆದುರೇ ಬಾಲಕಿ ನೀರಿನಲ್ಲಿ ಕೊಚ್ಚಿ ಹೋದಳು!

“BSP ಗೆದ್ದು ಬಂದ ನೆಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ” | ಬಿಎಸ್ ಪಿಯಿಂದ ಅಚ್ಚರಿಯ ಹೇಳಿಕೆ

ರೆಡ್ ಅಲಾರ್ಟ್: ಮುಂದಿನ 24 ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ

ಈಗ ಅವಕಾಶವಿದೆ, ದಲಿತ ಸಿಎಂ ಮಾಡಿ ತೋರಿಸಿ | ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಸವಾಲು

ಇತ್ತೀಚಿನ ಸುದ್ದಿ