ಸಿಎಂ ಬದಲಾವಣೆಯ ಬಗ್ಗೆ ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ನೀಡಿದ ಹೇಳಿಕೆ ಏನು ಗೊತ್ತಾ? - Mahanayaka

ಸಿಎಂ ಬದಲಾವಣೆಯ ಬಗ್ಗೆ ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ನೀಡಿದ ಹೇಳಿಕೆ ಏನು ಗೊತ್ತಾ?

kateel yediyurappa
26/07/2021

ಮಂಗಳೂರು:  ಸಿಎಂ ಬದಲಾವಣೆಯ ವಿಚಾರವಾಗಿ ನನಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದು, ನನಗೆ ಸಿಎಂ ಬದಲಾವಣೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ನಾನು ಆ ಬಗ್ಗೆ ಹೆಚ್ಚು ಏನನ್ನೂ ಉಲ್ಲೇಖ ಮಾಡುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.


Provided by

ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು “ಕಾದು ನೋಡಿ” ಎಂದು ಯಾವ ಅರ್ಥದಲ್ಲಿ ಹೇಳಿಕೆ ನೀಡಿದರು ಎನ್ನುವುದು ನನಗೆ ತಿಳಿದಿಲ್ಲ. ಸಿಎಂ 2 ವರ್ಷ ಅಧಿಕಾರ ಪೂರೈಸಿದ್ದು,  ಉತ್ತಮ ಆಡಳಿತ ನೀಡಿದ್ದಾರೆ.  ಕೊರೊನಾ ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಿದ್ದಾರೆ.  ಆರ್ಥಿಕ ಹೊಡೆತದ ನಡುವೆಯೂ ಒಳ್ಳೆಯ ಯೋಜನೆಗಳು ಪ್ರಕಟವಾಗಿವೆ. ಅದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಪಕ್ಷ ಹೇಳುವುದನ್ನು ಪಾಲಿಸುತ್ತೇನೆ ಎಂದು ಅವರು ಹೇಳುವ ಮೂಲಕ ಕಾರ್ಯಕರ್ತರಿಗೆ ಪ್ರೇರಣೆಯಾಗಿದ್ದಾರೆ. ಅವರು ನಮಗೆಲ್ಲ ಆದರ್ಶ.ಯಡಿಯೂರಪ್ಪನವರ ಮಾತು ನಮ್ಮೆಲ್ಲರ ಮಾತು ಕೂಡ ಆಗಿದೆ. ಅಧಿವೇಶನದ ಹಿನ್ನೆಲೆಯಲ್ಲಿ ನಾನು ನಾಳೆ ದೆಹಲಿಗೆ ತೆರಳುತ್ತಿದ್ದೇನೆ. 2 ವರ್ಷ ಆಡಳಿತ ಪೂರೈಸಿರುವುದಕ್ಕಾಗಿ ಯಡಿಯೂರಪ್ಪನವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಟೀಲ್ ಹೇಳಿದರು.

ಇನ್ನಷ್ಟು ಸುದ್ದಿಗಳು…

ಸಂಜೆಯ ಸಂದೇಶ ಬರಲಿಲ್ಲ! | ಆಟ ಇನ್ನೂ ಮುಗಿದಿಲ್ಲ, ನಾಳೆಗೆ ಶಿಫ್ಟ್ ಆಗುತ್ತಾ ಸಿಎಂ ಬದಲಾವಣೆ ಹೈಡ್ರಾಮಾ?

ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್

ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವುದು ಸೂಕ್ತವಲ್ಲ | ಎನ್.ಮಹೇಶ್

ಪತಿಯ ಜೊತೆಗೆ ಜಗಳವಾಡಿ, ತನ್ನ ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿದ ಪಾಪಿ ತಾಯಿ

 

ಇತ್ತೀಚಿನ ಸುದ್ದಿ