ಬಸವಣ್ಣಗೆ ಮಾಡಿದ ಅನ್ಯಾಯ ಯಡಿಯೂರಪ್ಪಗೂ ಆಯಿತು | ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಲಾಗಿದೆ | ಸತೀಶ್ ಜಾರಕಿಹೊಳಿ - Mahanayaka
5:56 AM Wednesday 20 - August 2025

ಬಸವಣ್ಣಗೆ ಮಾಡಿದ ಅನ್ಯಾಯ ಯಡಿಯೂರಪ್ಪಗೂ ಆಯಿತು | ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಲಾಗಿದೆ | ಸತೀಶ್ ಜಾರಕಿಹೊಳಿ

sathish jarakiholi yediyurappa
26/07/2021


Provided by

ಗೋಕಾಕ್: 12ನೇ ಶತಮಾನದಲ್ಲಿ ಬಸವಣ್ಣನಿಗೆ ಆದ ಅನ್ಯಾಯ ಬಿ.ಎಸ್. ಯಡಿಯೂರಪ್ಪನವರಿಗೆ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿದ್ದು, ಯಡಿಯೂರಪ್ಪನವರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಇಳಿಸಲಾಗಿದೆ ಎಂದು ಅವರು ಹೇಳಿದರು.

ಸಿಎಂ ಯಡಿಯೂರಪ್ಪನವರ ರಾಜೀನಾಮೆ ವಿಚಾರವಾಗಿ ಬೆಳಗಾವಿಯ ಗೋಕಾಕ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮನುವಾದಿಗಳು ಬಸವಣ್ಣನವರಿಗೆ ಮಾಡಿದ ಅನ್ಯಾಯವನ್ನೇ ಯಡಿಯೂರಪ್ಪನವರಿಗೂ ಮಾಡಿದ್ದಾರೆ. ಯಡಿಯೂರಪ್ಪನವರನ್ನು ಗೌರವಯುತವಾಗಿ ಅಧಿಕಾರದಿಂದ ಇಳಿಸಬಹುದಿತ್ತು. ಆದರೆ ಒತ್ತಡ ಹಾಕುವ ಮೂಲಕ ಅಧಿಕಾರದಿಂದ ಇಳಿಸಲಾಗಿದೆ ಎಂದು ಅವರು ಹೇಳಿದರು.

ಸಾವಿರಾರು ವರ್ಷಗಳ ಹಿಂದೆ ಬಸವಣ್ಣನಿಗೆ ಆದ ಅನ್ಯಾಯ ಯಡಿಯೂರಪ್ಪನವರಿಗೆ ಆಗಿದೆ. ಬಸವಣ್ಣನ ವಿರುದ್ಧ ನಡೆದ ಪಿತೂರಿ ಯಡಿಯೂರಪ್ಪನವರ ಹಿಂದಿನಿಂದಲೂ ನಡೆದಿದೆ. ಈ ಮನುವಾದಿಗಳ ವಿರುದ್ಧ ಯಡಿಯೂರಪ್ಪನವರು ಹೋರಾಡಬೇಕು ಎಂದು ಅವರು ಒತ್ತಾಯಿಸಿದರು.

ಇನ್ನಷ್ಟು ಸುದ್ದಿಗಳು…

ಕಟು ವಾಕ್ಯಗಳಿಂದ ಯಡಿಯೂರಪ್ಪ ರಾಜೀನಾಮೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ!

ರಾಜ್ಯ ಬಿಟ್ಟು ಎಲ್ಲಿಯೂ ಹೋಗಲ್ಲ ಎಂದ ಯಡಿಯೂರಪ್ಪ | ಸಿಎಂ ಸ್ಥಾನಕ್ಕೆ ರಾಜೀನಾಮೆಯ ಬಳಿಕ ಮುಂದಿನ ಆಯ್ಕೆ ಏನು?

ಯಾರಾಗಲಿದ್ದಾರೆ ಮುಂದಿನ ಸಿಎಂ? | ಅಮಿತ್ ಶಾ ಆತ್ಮೀಯರಾಗಿರುವ ಇವರಿಗೇ ಪಟ್ಟ ಕಟ್ಟುತ್ತಾರಾ?

ಮತದಾರರ ಗುರುತಿನ ಚೀಟಿ ಕಳೆದು ಹೋದರೆ ಏನು ಮಾಡಬೇಕು?

ಫೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ಆಯುರ್ವೇದ ವೈದ್ಯೆ!

ಇತ್ತೀಚಿನ ಸುದ್ದಿ