ಒಂದೇ ದಿನ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಅಣ್ಣ-ತಂಗಿ! - Mahanayaka
4:30 PM Saturday 17 - January 2026

ಒಂದೇ ದಿನ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಅಣ್ಣ-ತಂಗಿ!

heart attack
28/07/2021

ಸಿದ್ದಾಪುರ: ಒಂದೇ ದಿನ ಅಣ್ಣ-ತಂಗಿ ಇಬ್ಬರೂ ಹೃದಯಾಘಾತದಿಂದ ಮೃತಪಟ್ಟ ಘಟನೆಯೊಂದು  ಕುಂದಾಪುರದ ಬೆಳ್ವೆ ಗ್ರಾಮದ ಮಾರಿಕೊಡ್ಲು ಮದ್ದಗದ ದಂಡೆಯಲ್ಲಿ ಸಂಭವಿಸಿದ್ದು, ತಂಗಿಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಅಣ್ಣ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

60 ವರ್ಷ ವಯಸ್ಸಿನ ಗಿರಿಜಾ ಹಾಗೂ ಅವರ ಅಣ್ಣ 65 ವರ್ಷ ವಯಸ್ಸಿನ ಸುಬ್ಬಣ್ಣ ನಾಯ್ಕ್ ಸಾವಿನಲ್ಲಿಯೂ ಜೊತೆಯಾದವರಾಗಿದ್ದಾರೆ. ಸೋಮವಾರ ಮಧ್ಯಾಹ್ನ ತಂಗಿ ಗಿರೀಜಾ ಹೃದಯಾಘಾತದಿಂದ ಮೃತಪಟ್ಟಿದ್ದರು. ಗಿರಿಜಾ ಅವರ ಅಂತ್ಯಕ್ರಿಯೆಗೆ ರಾತ್ರಿ ಸುಮಾರು 7 ಗಂಟೆಯ ವೇಳೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಸುಬ್ಬಣ್ಣಗೂ ಹೃದಯಾಘಾತವಾಗಿದೆ.

ಸುಬ್ಬಣ್ಣ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರಿಂದಾಗಿ ಗಿರಿಜಾ ಅವರ ಅಂತ್ಯಕ್ರಿಯೆಯ ಬಳಿಕ ಪಕ್ಕದಲ್ಲಿಯೇ ಸುಬ್ಬಣ್ಣ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಇನ್ನಷ್ಟು ಸುದ್ದಿಗಳು…

ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೇಲೆ ಕಾರಿನಲ್ಲೇ ಅತ್ಯಾಚಾರ | ಬಾಡಿಗೆ ಮನೆ ಮಾಲಿಕನಿಂದ ಕೃತ್ಯ

ಅರ್ಚಕ ನೀಡಿದ ಪ್ರಸಾದ ಸೇವಿಸಿದ ಭಕ್ತರಿಗೆ ವಾಂತಿ ಭೇದಿ | 20ಕ್ಕೂ ಅಧಿಕ ಅಸ್ವಸ್ಥ

“ನಮ್ಮನ್ನು ಕೈ ಬಿಡಬೇಡಿ…”! ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಹಿಂದೆ ಬಿದ್ದ ಮಾಜಿ ಸಚಿವರು, ಶಾಸಕರು!

ಯಡಿಯೂರಪ್ಪ ಕಣ್ಣೀರು ನೋಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ರಾಜಾಹುಲಿ!

ಇತ್ತೀಚಿನ ಸುದ್ದಿ