ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ: ಈಶ್ವರಪ್ಪ ನೀಡಿದ ಸುಳಿವೇನು? - Mahanayaka
11:12 PM Tuesday 14 - October 2025

ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ: ಈಶ್ವರಪ್ಪ ನೀಡಿದ ಸುಳಿವೇನು?

eshwarappa
02/08/2021

ಶಿವಮೊಗ್ಗ: ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದು, ಹೊಸಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬಹುದು ಎನ್ನುವ ಸುಳಿವನ್ನು ಅವರು ನೀಡಿದ್ದಾರೆ.


Provided by

ಇನ್ನೊಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ. ಎಲ್ಲ ಭಗವಂತ ಮತ್ತು ಹೈಕಮಾಂಡ್ ಗೆ ಬಿಟ್ಟಿದ್ದು. ಸಂಪುಟ ವಿಸ್ತರಣೆಯಲ್ಲಿ ಕೃಷ್ಣನ ತಂತ್ರಗಾರಿಕೆಯನ್ನು ಹೈಕಮಾಂಡ್ ಅನುಸರಿಸಬಹುದು. ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಬಿಡುತ್ತದೆ ಎಂದು ತಿಳಿದಿಲ್ಲ ಎಂದು ಅವರು ಹೇಳಿದರು.

ಹೈಕಮಾಂಡ್ ಒತ್ತಡ, ಲಾಬಿಗೆ ಮಣಿಯುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ, ಹಾಗಾಗಿ ನಮ್ಮ ಪಕ್ಷಕ್ಕೆ ವಲಸೆ ಬಂದ ಕೆಲವರಿಗೆ ಅವಕಾಶ ಸಿಗದಿರಬಹುದು ಎಂದು ಕೆ.ಎಸ್.ಈಶ್ವರಪ್ಪ, ಸಚಿವ ಸಂಪುಟ ವಿಸ್ತರಣೆ ಸಂಬಂಧ ಸುಳಿವು ನೀಡಿದರು.

ಇನ್ನೂ ಬಸವರಾಜ್ ಬೊಮ್ಮಾಯಿ ಸರ್ಕಾರ ಮುಂದಿನ 6 ತಿಂಗಳು ಮಾತ್ರವೇ ಇರುತ್ತದೆ ಎಂದು ಸ್ವಾಮೀಜಿಯೊಬ್ಬರು ಹೇಳಿರುವ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ. ಅದು ಸತ್ಯವೂ ಆಗಬಹುದು, ಸುಳ್ಳೂ ಆಗಬಹುದು ಎಂದು ಅವರು ಹೇಳಿದರು.

ಇನ್ನಷ್ಟು ಸುದ್ದಿಗಳು…

ಸದಾನಂದ ಗೌಡ, ರೇಣುಕಾಚಾರ್ಯ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿದ್ದಾರೆ | ಸಿದ್ದರಾಮಯ್ಯ ಹೇಳಿದ್ದೇನು?

ಬಸ್ ಪ್ರಯಾಣ ದರ ಏರಿಕೆಯಿಂದ ಜನರಿಗೆ ತೊಂದರೆಯಾಗುತ್ತೆ ಎನ್ನುವುದು ಜಿಲ್ಲಾಧಿಕಾರಿಗೆ ತಿಳಿದಿಲ್ಲವೇ? | ಪ್ರತಿಭಟನಾಕಾರರ ಪ್ರಶ್ನೆ

ಕಂಡ ಕನಸನ್ನು ನನಸು ಮಾಡಿದ ಅರಲ್

ಲಾಡ್ಜ್ ನಲ್ಲಿ ಬಾಲಕನ ಅತ್ಯಾಚಾರ | ಮದ್ರಸ ಶಿಕ್ಷಕನಿಗೆ 11 ವರ್ಷ ಜೈಲು

“ಕಸವು ಕಸದ ಬುಟ್ಟಿಗೆ ಸೇರಿತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆ ಹಿನ್ನೆಲೆ ಪರ-ವಿರೋಧ ಚರ್ಚೆ!

ಇತ್ತೀಚಿನ ಸುದ್ದಿ