ಅಪ್ರಾಪ್ತೆಯರನ್ನು ಗರ್ಭಿಣಿಯಾಗಿಸಿ ಪರಾರಿಯಾಗುತ್ತಿದ್ದಾತನನ್ನು ಉಪಾಯವಾಗಿ ಬಂಧಿಸಿದ ಮಹಿಳಾ ಎಸ್ ಐ! - Mahanayaka
12:13 AM Wednesday 20 - August 2025

ಅಪ್ರಾಪ್ತೆಯರನ್ನು ಗರ್ಭಿಣಿಯಾಗಿಸಿ ಪರಾರಿಯಾಗುತ್ತಿದ್ದಾತನನ್ನು ಉಪಾಯವಾಗಿ ಬಂಧಿಸಿದ ಮಹಿಳಾ ಎಸ್ ಐ!

priyanka saini
05/08/2021


Provided by

ದೆಹಲಿ: ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಮರುಳು ಮಾಡಿ ಅವರ ಜೊತೆಗೆ ದೈಹಿಕ ಸಂಪರ್ಕ ನಡೆಸಿ, ಆಕೆ ಗರ್ಭಿಣಿಯಾದಾಗ ಪರಾರಿಯಾಗುತ್ತಿದ್ದ ಆರೋಪಿಯೋರ್ವನನ್ನು  ಮಹಿಳಾ ಸಬ್ ಇನ್ಸ್ ಪೆಕ್ಟರ್ ವೊಬ್ಬರು ಉಪಾಯವಾಗಿ ಬಂಧಿಸಿದ ಘಟನೆ ನಡೆದಿದೆ.

ಕಳೆದ 15 ತಿಂಗಳಿನಲ್ಲಿ ಆರೋಪಿಯು 6ಕ್ಕೂ ಅಧಿಕ ಹೆಣ್ಣು ಮಕ್ಕಳ ಜೀವನದ ಜೊತೆಗೆ ಆಟವಾಡಿದ್ದಾನೆ. ಗರ್ಭಿಣಿಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳು  ಆಸ್ಪತ್ರೆಗೆ ಆಗಮಿಸಿದ್ದು, ಈ ವೇಳೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ವಿಚಾರಿಸಿದಾಗ ಆಕೆ ಮಾಹಿತಿ ನೀಡಲು ಹಿಂಜರಿದಿದ್ದಾಳೆ.

ಈ ವೇಳೆ ಈ ಪ್ರಕರಣಕ್ಕೆ ಮಹಿಳಾ ಎಸ್ ಐ ಪ್ರಿಯಾಂಕಾ ಶೈನಿ ಎಂಟ್ರಿಯಾಗಿದ್ದಾರೆ. ಅವರು ಬಾಲಕಿಯ ಬಳಿಯಲ್ಲಿ ಆತ್ಮೀಯವಾಗಿ ನಡೆದುಕೊಂಡು, ಘಟನೆಯ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಬಾಲಕಿ ನೀಡಿದ ಮಾಹಿತಿಯ ಪ್ರಕಾರ, ಆರೋಪಿಯು ಬಾಲಕಿಯ ಮನೆಯ ಸಮೀಪದವನೇ ಆಗಿದ್ದ. ಆತಮ ಜೊತೆಗೆ ಫೇಸ್ ಬುಕ್ ನಲ್ಲಿ ಈಕೆಗೆ ಪರಿಚಯವಾಗಿದ್ದು, ಪರಿಚಯವನ್ನೇ ಬಳಸಿಕೊಂಡ ಆರೋಪಿ ಬಾಲಕಿಯ ಜೊತೆಗೆ ಸಲುಗೆ ಬೆಳೆಸಿಕೊಂಡು ದೈಹಿಕ ಸಂಪರ್ಕ ನಡೆಸಿದ್ದಾನೆ. ಆ ಬಳಿಕ ಬಾಲಕಿ ಗರ್ಭಿಣಿಯಾಗಿದ್ದು, ಈ ವಿಚಾರ  ತಿಳಿಯುತ್ತಿದ್ದಂತೆಯೇ ಆತ ಸ್ಥಳದಿಂದ ತಲೆಮರೆಸಿಕೊಂಡಿದ್ದಾನೆ. ಇತ್ತ ಬಾಲಕಿ ಗರ್ಭಪಾತ ಮಾಡಿಸಲು ಆಸ್ಪತ್ರೆಗಳಿಗೆ ಅಲೆದಾಡುವಂತಾಗಿತ್ತು.

ಬಾಲಕಿಯಿಂದ ಮಾಹಿತಿ ಪಡೆದುಕೊಂಡ ಎಸ್ ಐ ಪ್ರಿಯಾಂಕಾ, ಆರೋಪಿಯ ಫೇಸ್ ಬುಕ್ ನ್ನು ಜಾಲಾಡಿದ್ದು, ಹಲವು ಯುವತಿಯರ ಬಳಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಈತನಿಂದ ಹಲವರು ಮೋಸ ಹೋಗಿರುವುದು ತಿಳಿದು ಬಂದಿದೆ. ಈ ವೇಳೆ ಪ್ರಿಯಾಂಕಾ ಅವರು ತಾವೇ ಒಂದು ನಕಲಿ ಐಡಿ ಸೃಷ್ಟಿಸಿ ಆರೋಪಿಗೆ ಫ್ರೆಂಡ್ ರಿಕ್ವೆಸ್ಟ್ ನೀಡಿದ್ದಾರೆ.

ಫ್ರೆಂಡ್ ರಿಕ್ವೆಸ್ಟ್ ನೀಡಿದ ತಕ್ಷಣವೇ ಸ್ವೀಕರಿಸಿದ ಆರೋಪಿ, ಚಾಟ್ ಮಾಡಲು ಆರಂಭಿಸಿದ್ದಾನೆ. ಆದರೆ, ಆತನ ವಿವರಗಳನ್ನು ನೀಡಲು ನಿರಾಕರಿಸಿದ್ದು, ನೀನು ನನ್ನ ಬಗ್ಗೆ ತಿಳಿದುಕೊಳ್ಳಬೇಕಾದರೆ,  ನನ್ನನ್ನು ಭೇಟಿಯಾಗಬೇಕು. ಎಲ್ಲದರ ಬಗ್ಗೆ ಮಾತನಾಡಬೇಕು ಎಂದು ಷರತ್ತು ಹಾಕಿದ್ದಾನೆ. ಆತನ ಷರತ್ತುಗೆ  ಪ್ರಿಯಾಂಕಾ ಒಪ್ಪಿಗೆ ನೀಡುತ್ತಾರೆ.

ಹಾಗೆಯೇ ಆರೋಪಿಯನ್ನು ಭೇಟಿ ಮಾಡಲು ಪೊಲೀಸರು ಸಿವಿಲ್ ಡ್ರೆಸ್ ನಲ್ಲಿ ತೆರಳಿದ್ದಾರೆ. ಈ ವೇಳೆ ಆತ ರೈಲ್ವೇ ನಿಲ್ದಾಣಕ್ಕೆ ಬರುವುದಾಗಿ ಹೇಳಿದ್ದರೂ ಅಲ್ಲಿಗೆ ಬಾರದೇ, ಮಹಾವೀರ್ ಎನ್ ಕ್ಲೇವ್ ಗೆ ಬರುವಂತೆ ಹೇಳಿದ್ದ. ಅಲ್ಲಿಗೆ ಪ್ರಿಯಾಂಕಾ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ತನ್ನನ್ನು ಭೇಟಿಯಾದ ಯುವತಿಯರಿಗೆ ತನ್ನ ನಿಜವಾದ ಹೆಸರು ಮತ್ತು ಫೋನ್ ನಂಬರ್ ನೀಡದೇ ದೈಹಿಕ ಸಂಪರ್ಕ ನಡೆಸುತ್ತಿದ್ದ ಬಳಿಕ ಅವರಿಂದ ದೂರವಾಗುತ್ತಿದ್ದ ಎಂದು ಪೊಲೀಸರ ವಿಚಾರಣೆಯ ವೇಳೆ ತಿಳಿಸಿದ್ದಾನೆ. ಸದ್ಯ ಆತನ ಬಗ್ಗೆ ಇನ್ನಷ್ಟು  ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಇನ್ನಷ್ಟು  ಸುದ್ದಿಗಳು…

ಸ್ಮಶಾನದ ಅರ್ಚಕ ಸೇರಿದಂತೆ ಮೂವರಿಂದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ದೇಶಾದ್ಯಂತ ಆಕ್ರೋಶ

ಪ್ರೀತಿಗೆ ದ್ರೋಹ ಬಗೆದ ಪತ್ನಿ, ಸ್ನೇಹಕ್ಕೆ ದ್ರೋಹ ಬಗೆದ ಸ್ನೇಹಿತ | ತಂದೆಯ ಹತ್ಯೆಯಿಂದ ಅನಾಥಳಾದ ಮಗಳು!

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ  ಕಿರುಕುಳ | ಆರೋಪಿ ಅರೆಸ್ಟ್

ಮಹಿಳೆಯ ಸೀರೆಯ ಪಿನ್ ಚುಚ್ಚಿ ಮಾಜಿ ಸಿಎಂ ಯಡಿಯೂರಪ್ಪನವರ ಕೈಗೆ ಗಾಯ!

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ  ಕಿರುಕುಳ | ಆರೋಪಿ ಅರೆಸ್ಟ್

ಇತ್ತೀಚಿನ ಸುದ್ದಿ