ದೇವೇಗೌಡರನ್ನು ಭೇಟಿಯಾದ ಸಿ.ಟಿ.ರವಿ | ಹಲವು ಸಮಯಗಳವರೆಗೆ ಚರ್ಚೆ - Mahanayaka
10:11 AM Thursday 22 - January 2026

ದೇವೇಗೌಡರನ್ನು ಭೇಟಿಯಾದ ಸಿ.ಟಿ.ರವಿ | ಹಲವು ಸಮಯಗಳವರೆಗೆ ಚರ್ಚೆ

c t ravi
10/08/2021

ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭೇಟಿಯಾಗಿದ್ದು, ಹಲವು ವಿಚಾರಗಳ ಬಹಳಷ್ಟು ಸಮಯಗಳ ವರೆಗೆ ಚರ್ಚೆ ನಡೆಸಿದ್ದಾರೆ.

ಮಾಹಿತಿಗಳ ಪ್ರಕಾರ, ಇದು ಯಾವುದೇ ರಾಜಕೀಯ ಭೇಟಿಯಾಗಿರಲಿಲ್ಲ. ಬದಲಾಗಿ ಭಾರತದ ರಾಜಕೀಯ ಕುರಿತಂತೆ ಸಿ.ಟಿ.ರವಿ ಪಿಎಚ್ ಡಿ ಮಾಡುತ್ತಿದ್ದು, ಹೀಗಾಗಿ ರಾಜಕೀಯ ಸಂಶೋಧನೆಯ ಭಾಗವಾಗಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ರಾಜಕೀಯಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಭೇಟಿಯ ಬಳಿಕ ಸಿ.ಟಿ.ರವಿ, ದೇವೇಗೌಡರ ರಾಜಕೀಯದ ಅಪಾರ ಅನುಭವದ ಬಗ್ಗೆ ಮನತುಂಬಿ ಹೊಗಳಿದ್ದಾರೆ. ಇತ್ತೀಚೆಗೆ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ನಾಯಕರು ಬಹಳಷ್ಟು ಆತ್ಮೀಯರಾಗುತ್ತಿರುವ ನಡುವೆಯೇ ಸಿ.ಟಿ.ರವಿ ಹಾಗೂ ದೇವೇಗೌಡರ ಭೇಟಿ ಕುತೂಹಲಕ್ಕೆ ಕಾರಣವಾಗಿತ್ತು.  ಆದರೆ, ಇದೊಂದು ಸಂಶೋಧನೆಗೆ ಸಂಬಂಧಿಸಿದ ಭೇಟಿ ಎನ್ನುವುದು ಸ್ಪಷ್ಟವಾಗಿದೆ.

ಇನ್ನಷ್ಟು ಸುದ್ದಿಗಳು…

“ಮಾತಾಡಿ ಪ್ರಧಾನಿಗಳೇ ಮಾತನಾಡಿ” | ಆ.10ರಿಂದ 15ರವರೆಗೆ ಆನ್ ಲೈನ್ ಅಭಿಯಾನ

ಬಿಟ್ರೋಟ್ ಬಳಕೆಯಿಂದ ನಮ್ಮ ಆರೋಗ್ಯಕ್ಕೆ ಏನೇನು ಲಾಭ ಇದೆ ಗೊತ್ತಾ?

11 ಬಾರಿ ಮೆದುಳಿನ ಶಸ್ತ್ರ ಚಿಕಿತ್ಸೆಗೊಳಪಟ್ಟಿದ್ದ ಖ್ಯಾತ ನಟಿಯನ್ನು ಬಲಿ ಪಡೆದ ಕೊವಿಡ್ 19

“ಲವ್ ಯೂ ರಚ್ಚು” ಚಿತ್ರದ ಶೂಟಿಂಗ್ ವೇಳೆ ಅವಘಡ | ಓರ್ವ ಸಾವು, ಇನ್ನೋರ್ವನಿಗೆ ಗಾಯ | ನಟ ಅಜಯ್ ರಾವ್ ಆಕ್ರೋಶ

SSLC Exam result 2021 | ಓರ್ವ ವಿದ್ಯಾರ್ಥಿಯನ್ನು ಹೊರತುಪಡಿಸಿ, ಎಲ್ಲರೂ ಪಾಸ್

ಎಟಿಎಂ ಒಡೆಯುತ್ತಿದ್ದ ವೇಳೆ ಎಟಿಎಂನಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ! | ಮುಂದೆ ನಡೆದದ್ದೇನು ಗೊತ್ತಾ?

ಇತ್ತೀಚಿನ ಸುದ್ದಿ