ಹೃದಯ ವಿದ್ರಾವಕ ಘಟನೆ: ಬೀಡಿ ಬ್ರಾಂಚ್ ಗೆ ತೆರಳುತ್ತಿದ್ದ ಮಹಿಳೆಯರಿಗೆ ರೈಲು ಡಿಕ್ಕಿ | ಇಬ್ಬರು ಬಲಿ - Mahanayaka

ಹೃದಯ ವಿದ್ರಾವಕ ಘಟನೆ: ಬೀಡಿ ಬ್ರಾಂಚ್ ಗೆ ತೆರಳುತ್ತಿದ್ದ ಮಹಿಳೆಯರಿಗೆ ರೈಲು ಡಿಕ್ಕಿ | ಇಬ್ಬರು ಬಲಿ

train
21/08/2021


Provided by

ಮಂಗಳೂರು: ಬೀಡಿ ಬ್ರಾಂಚ್ ಗೆ ತೆರಳುತ್ತಿದ್ದ ಇಬ್ಬರು ಮಹಿಳೆಯರು ರೈಲು ಡಿಕ್ಕಿಯಾಗಿ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಮಹಾಕಾಳಿ ಪಡ್ಪು ಬಳಿಯಲ್ಲಿ ನಡೆದಿದೆ.

50 ವರ್ಷ ವಯಸ್ಸಿನ ವಸಂತಿ ಹಾಗೂ 48 ವರ್ಷ ವಯಸ್ಸಿನ ಪ್ರೇಮಾ ಎಂಬವರು ಮೃತಪಟ್ಟವರಾಗಿದ್ದು, ಶನಿವಾರ ಬೆಳಗ್ಗೆ ಬೀಡಿ ಕೊಡಲೆಂದು ಬ್ರ್ಯಾಂಚ್ ಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಪ್ರತಿ ದಿನ ಇವರು ಇದೇ ದಾರಿಯಲ್ಲಿ ಬೀಡಿ ಬ್ರ್ಯಾಂಚ್ ಗೆ ತೆರಳುತ್ತಿದ್ದರು. ಆದರೆ ಇಂದು ಅವರು ತೆರಳುತ್ತಿದ್ದ ವೇಳೆ ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಇಬ್ಬರು ಕೂಡ ಸಾವಿಗೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನಷ್ಟು ಸುದ್ದಿಗಳು…

ಕೊಲೆ ಆರೋಪಿ ವಿನಯ್ ಕುಲಕರ್ಣಿ ಜಾಮೀನಿನಲ್ಲಿ ಬಿಡುಗಡೆ | ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ದಲಿತ ಕೂಲಿ ಕಾರ್ಮಿಕನ ಮೇಲೆ ವಿಷಪೂರಿತ ಆ್ಯಸಿಡ್ ಎರಚಿ, ಮಾರಣಾಂತಿಕ ಹಲ್ಲೆ

ಪಾಕಿಸ್ತಾನ ಪರ ಘೋಷಣೆ: ಮೊಹರಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 6 ಯುವಕರ ಬಂಧನ

ಬದುಕಿದ್ದ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿದ ಕೇಂದ್ರ ಸಚಿವ: ಜನಾಶೀರ್ವಾದ ಯಾತ್ರೆಯಲ್ಲಿ ಯಡವಟ್ಟು

ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣವೇ ನಟಿಯ ಬೆಡ್ ರೂಂ ದೃಶ್ಯ ವೈರಲ್ ! | ನಟಿಯ ಪ್ರತಿಕ್ರಿಯೆ ಏನು?

ಇತ್ತೀಚಿನ ಸುದ್ದಿ