ಶಾಕಿಂಗ್ ನ್ಯೂಸ್: ಮಗುವಿಗೆ ಜನ್ಮ ನೀಡಿದ 12 ವರ್ಷ ವಯಸ್ಸಿನ ಬಾಲಕಿ - Mahanayaka
10:28 AM Saturday 23 - August 2025

ಶಾಕಿಂಗ್ ನ್ಯೂಸ್: ಮಗುವಿಗೆ ಜನ್ಮ ನೀಡಿದ 12 ವರ್ಷ ವಯಸ್ಸಿನ ಬಾಲಕಿ

born baby
24/08/2021


Provided by

ಜೋದ್ ಪುರ: ಅತ್ಯಾಚಾರಕ್ಕೊಳಗಾಗಿದ್ದ  12 ವರ್ಷ ವಯಸ್ಸಿನ ಬಾಲಕಿಯೋರ್ವಳು ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯವಂತರಾಗಿದ್ದಾರೆ ಎಂದು ರಾಜಸ್ಥಾನ ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ.

ಇಲ್ಲಿನ ಬಾಲೆಸಾರ್ ಉಪವಿಭಾಗದಲ್ಲಿ ತಿಂಗಳ ಹಿಂದೆ ನಡೆದಿದ್ದ ಘಟನೆಯೊಂದರಲ್ಲಿ, ಬಾಲಕಿಗೆ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಪೋಷಕರು  ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ಬಾಲಕಿಯು ಗರ್ಭಿಣಿ ಎಂದು ತಿಳಿದು ಬಂದಿತ್ತು.

ಈ ವೇಳೆ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ಇಬ್ಬರು ಅಪ್ರಾಪ್ತ ವಯಸ್ಕರು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆಕೆ ತಿಳಿಸಿದ್ದಾಳೆ. ಇದರಿಂದಾಗಿ ಬಾಲಕಿಯ ಪೋಷಕರು ಮಾನಕ್ಕೆ ಅಂಜಿ, ಗರ್ಭಪಾತ ನಡೆಸುವಂತೆ ಒತ್ತಾಯಿಸಿದ್ದಾರೆ. ಆದರೆ, ಬಾಲಕಿಯ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದರಿಂದಾಗಿ ಪೋಷಕರು ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು ಎನ್ನಲಾಗಿದೆ. ಇದೀಗ ಬಾಲಕಿಯು ಮಗುವಿಗೆ ಜನ್ಮ ನೀಡಿದ್ದಾರೆ.

ಇನ್ನೂ ಬಾಲಕಿಯು ತನ್ನ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳ ಗುರುತು ಮತ್ತು ಹೆಸರು ಪೊಲೀಸರಿಗೆ ತಿಳಿಸಿದ್ದು, ರಾಜಸ್ಥಾನ ಮಕ್ಕಳ ಹಕ್ಕುಗಳು ರಕ್ಷಣಾ ಆಯೋಗದ ಆಧಿಕಾರಿಗಳು ಆರೋಪಿ ಬಾಲಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಕ್ರಿಮಿನಲ್ ಹಿನ್ನೆಲೆಯ ಜನಪ್ರತಿನಿಧಿಗಳಿಗೆ ಬಿಗ್ ಶಾಕ್ | 6 ವರ್ಷಗಳ ಕಾಲ ಅನರ್ಹರಾಗುವ ಸಾಧ್ಯತೆ

ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ?

ಪಿಸ್ತೂಲ್ ಸ್ವಚ್ಛಗೊಳಿಸುತ್ತಿರುವ ವೇಳೆ ಹಾರಿದ ಗುಂಡು | ಕಾನ್ಟ್ಟೇಬಲ್ ದಾರುಣ ಸಾವು

ಅಫ್ಘಾನಿಸ್ತಾನ ಮತ್ತೆ ಭಯೋತ್ಪಾದನೆಯ ಕೇಂದ್ರಬಿಂದು ಆಗದಿರಲಿ: ಸಿಂಗಪುರ ಪ್ರಧಾನಿ

ವಿಡಿಯೋ ಮುಂದಿಟ್ಟುಕೊಂಡು ಬಿಜೆಪಿ ಮುಖಂಡ ಚಿ.ನಾ.ರಾಮು ವಿರುದ್ಧ ಮಹಿಳೆಯಿಂದ ಬ್ಲ್ಯಾಕ್ ಮೇಲ್ | ದೂರು ದಾಖಲು

ಇತ್ತೀಚಿನ ಸುದ್ದಿ