ಅಮಾನವೀಯ ಘಟನೆ: ಪತ್ನಿಯ ಖಾಸಗಿ ಅಂಗಕ್ಕೆ ಸೂಜಿದಾರದಿಂದ ಹೊಲಿಗೆ ಹಾಕಿದ ಪತಿ - Mahanayaka

ಅಮಾನವೀಯ ಘಟನೆ: ಪತ್ನಿಯ ಖಾಸಗಿ ಅಂಗಕ್ಕೆ ಸೂಜಿದಾರದಿಂದ ಹೊಲಿಗೆ ಹಾಕಿದ ಪತಿ

bhopal women
28/08/2021


Provided by

ಭೋಪಾಲ್:  ವ್ಯಕ್ತಿಯೋರ್ವ ತನ್ನ ಪತ್ನಿಯ ನಡತೆಯನ್ನು ಶಂಕಿಸಿ, ಆಕೆಯ ಖಾಸಗಿ ಅಂಗವನ್ನು ಸೂಜಿದಾರದಿಂದ ಹೊಲಿಗೆ ಹಾಕಿದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದ್ದು, ಘಟನೆ ಸಂಬಂಧ ಪತಿಯ ಪತ್ನಿ ದೂರು ನೀಡಿದ್ದಾಳೆ.

64 ವರ್ಷ ವಯಸ್ಸಿನ ಪತಿಯೂ ಈ ಕೃತ್ಯ ನಡೆಸಿದ್ದು, ಈತನ ವಿರುದ್ಧ 55 ವರ್ಷ ವಯಸ್ಸಿನ ಪತ್ನಿ ದೂರು ನೀಡಿದ್ದು, ದಾರ ಮತ್ತು ಸೂಜಿಯನ್ನು ಬಳಸಿ ಪತಿಯು ಖಾಸಗಿ ಅಂಗವನ್ನು ಹೊಲಿಯಲು ಮುಂದಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಪತಿಯ ಕೃತ್ಯದಿಂದಾಗಿ ಮಹಿಳೆಗೆ ಗಾಯವಾಗಿದೆ. ಆರೋಪಿಯು ಕೃತ್ಯಕ್ಕೆ ಬಳಸಿದ ಸೂಜಿ ಮತ್ತು ದಾರವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಸಂಬಂಧಿಸಿದ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಇಷ್ಟೊಂದು ಘೋರ ಕೃತ್ಯ ನಡೆದಿದ್ದರೂ, ಪತ್ನಿಯು ತನ್ನ ಪತಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬಾರದು ಎಂದು ಪೊಲೀಸರಿಗೆ ಕೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಮೈಸೂರು: ಅತ್ಯಾಚಾರ ಪ್ರಕರಣ | ತಮಿಳುನಾಡಿನಲ್ಲಿ ಐವರು ಆರೋಪಿಗಳ ಬಂಧನ

ಮೈಸೂರಿನ ಬೆನ್ನಲ್ಲೇ ಮತ್ತೊಂದು ಸಾಮೂಹಿಕ ಅತ್ಯಾಚಾರ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಆ.30ರಂದು ಟೀಮ್ ಹಿಂದುತ್ವ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಕ್ಲಬ್ ಹೌಸ್ ನಲ್ಲಿ ಹಿಂದೂ ಸಮಾವೇಶ | ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ

126 ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ವಿಮಾನದ ಪೈಲಟ್ ಗೆ ಹೃದಯಾಘಾತ: ಮುಂದೆ ನಡೆದದ್ದೇನು?

ಪುರುಷರು ಮಾಡಿದ ತಪ್ಪಿಗೆ ಮಹಿಳೆಯರನ್ನೇ ಯಾಕೆ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ | ನಟಿ ರಮ್ಯಾ ಪ್ರಶ್ನೆ

ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ ಸವರ್ಣಿಯರಿಂದ ಸಾಮಾಜಿಕ ಬಹಿಷ್ಕಾರ

ಸರ್ಕಾರ ಮಾರಾಟದಲ್ಲಿ ನಿರತವಾಗಿದೆ, ನಿಮ್ಮ ಆರೋಗ್ಯ ನೀವೇ ನೋಡಿಕೊಳ್ಳಿ | ರಾಹುಲ್ ಗಾಂಧಿ

ಇತ್ತೀಚಿನ ಸುದ್ದಿ