ಆಟವಾಡುತ್ತಿದ್ದ ಬಾಲಕನ ಮೇಲೆ ಪೈಪ್ ಉರುಳಿಬಿದ್ದು ಬಾಲಕ ಸಾವು! - Mahanayaka
6:21 AM Wednesday 10 - September 2025

ಆಟವಾಡುತ್ತಿದ್ದ ಬಾಲಕನ ಮೇಲೆ ಪೈಪ್ ಉರುಳಿಬಿದ್ದು ಬಾಲಕ ಸಾವು!

yuvaraja
02/09/2021

ಮುಲ್ಕಿ:  ಸಿಮೆಂಟ್ ತಯಾರಿಕೆ ಘಟಕದ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಸಿಮೆಂಟ್ ಪೈಪ್ ಉರುಳಿ ಬಿದ್ದು ಬಾಲಕ ಸಾವನ್ನಪ್ಪಿದ ದಾರುಣ ಘಟನೆಯೊಂದು  ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಕಾರ್ನಾಡು ಸದಾಶಿವ ನಗರ ಆಶ್ರಯ ಕಾಲನಿ ಬಳಿಯಲ್ಲಿ ನಡೆದಿದೆ.


Provided by

ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಲಿಂಗಪ್ಪಯ್ಯ ಕಾಡಿನ ನಿವಾಸಿ ರಾಮು ಅವರ 4 ವರ್ಷ ವಯಸ್ಸಿನ ಮಗ ಯುವರಾಜ ಮೃತಪಟ್ಟ ಬಾಲಕನಾಗಿದ್ದು, ಬಾಲಕನ ತಂದೆ ಇದೇ ಘಟಕದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬಾಲಕ ಯುವರಾಜ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಈ ವೇಳೆ ಜೋಡಿಸಿಟ್ಟಿದ್ದ ಪೈಪ್ ಗಳು ಬಾಲಕನ ಮೈಮೇಲೆ ಬಿದ್ದಿದೆ.  ಈ ವೇಳೆ ಜೊತೆಗಿದ್ದ ಇತರ ಮಕ್ಕಳು ಬೊಬ್ಬೆ ಹಾಕಿ ಕರೆದಿದ್ದು, ತಕ್ಷಣ ಘಟಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮಗುವನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಗುವು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಘಟನೆ ಸಂಬಂಧ ಮುಲ್ಕಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಕೈಕೊಟ್ಟ ಕೇಂದ್ರ ಸರ್ಕಾರ: ಈ ಪ್ರಮುಖ 10 ಯೋಜನೆಗಳಿಗೆ ಬಿಡಿಗಾಸೂ ಬಿಡುಗಡೆಯಾಗಿಲ್ಲ!

ನೀರಿನ ಬಾಟಲಿಯೇ ಬೆಂಗಳೂರಿನ ಅಪಘಾತಕ್ಕೆ ಕಾರಣವಾಯ್ತೆ? | ಅಪಘಾತದ ವೇಳೆ ನಡೆದದ್ದೇನು?

ನ್ಯಾಯಾಲಯದ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಫೋಕ್ಸೋ ಪ್ರಕರಣದ ಆರೋಪಿ

ಎಣ್ಣೆ ಪಾರ್ಟಿಯ ಬಳಿಕ ಡಬ್ಬಲ್ ಮರ್ಡರ್ | ಸ್ನೇಹಿತರಿಂದಲೇ ನಡೆಯಿತು ದುಷ್ಕೃತ್ಯ!

ವಿಪರೀತ ವೇಗದಿಂದ ಬಂದು ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಕಾರು: 7 ಮಂದಿ ಬಲಿ

ಇತ್ತೀಚಿನ ಸುದ್ದಿ