ಹೇಯ ಕೃತ್ಯ: 6 ವರ್ಷದ ಮಗುವಿನ ಮೇಲೆ ಚಿಕ್ಕಪ್ಪನಿಂದಲೇ ಲೈಂಗಿಕ ದೌರ್ಜನ್ಯ - Mahanayaka
10:55 AM Saturday 23 - August 2025

ಹೇಯ ಕೃತ್ಯ: 6 ವರ್ಷದ ಮಗುವಿನ ಮೇಲೆ ಚಿಕ್ಕಪ್ಪನಿಂದಲೇ ಲೈಂಗಿಕ ದೌರ್ಜನ್ಯ

kannur kerala
11/09/2021


Provided by

ಕಣ್ಣೂರು: ಇಂತಹ ಘಟನೆಗಳನ್ನು ನೋಡಿದರೆ, ಸಂಬಂಧಕ್ಕೆ ಬೆಲೆಯೇ ಇಲ್ಲವೇ? ಎಂದು ಅನ್ನಿಸುವುದು ಸಹಜ. ಹೀಗಾದರೆ, ನಮ್ಮ ರಕ್ತ ಸಂಬಂಧಿಗಳ ಸಮೀಪವೂ ನಮ್ಮ ಹೆಣ್ಣು ಮಕ್ಕಳನ್ನು ಹೇಗೆ ಬಿಟ್ಟು ಹೋಗುವುದು ಎಂದು ಪೋಷಕರು ಕೂಡ ಚಿಂತಾಕ್ರಾಂತರಾಗಲೂಬಹುದು. ಕೇರಳದ ಕಣ್ಣೂರಿನಲ್ಲಿ ನಡೆದ ಘಟನೆಯೊಂದರಲ್ಲಿ ಚಿಕ್ಕಪ್ಪನೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆಯೊಂದು ನಡೆದಿದೆ.

ಕೇರಳದ ಕಣ್ಣೂರಿನ ತಳಿಪರಂಬನ 6 ವರ್ಷ ವಯಸ್ಸಿನ ಬಾಲಕಿಯೋರ್ವಳಿಗೆ ಅನಾರೋಗ್ಯ ಕಾಡಿದ್ದು, ಇದರಿಂದಾಗಿ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿದೆ.

ಈ ವೇಳೆ ಮಗುವನ್ನು ವಿಚಾರಿಸಿದಾಗ ಚಿಕ್ಕಪ್ಪನೇ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಮಗು ಹೇಳಿದೆ. ಎರಡು ತಿಂಗಳ ಮೊದಲು ಕೂಡ ಆರೋಪಿಯು ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಎನ್ನುವುದು ಕೂಡ ಬಯಲಾಗಿದೆ.

ಮಗುವಿನ ತಂದೆಯ ಸಹೋದರನೇ ಈ ಕೃತ್ಯ ಎಸಗಿದ್ದು, ಈ ಹಿನ್ನೆಲೆಯಲ್ಲಿ ಮಗುವಿನ ತಾಯಿಯು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನನ್ವಯ ಆರೋಪಿಯ ವಿರುದ್ಧ ದೂರು ದಾಖಲಿಸಲಾಗಿದೆ. ಇನ್ನೂ ಆರೋಪಿಯು ಮಂಜೇಶ್ವರದಲ್ಲಿ ಈ ಕೃತ್ಯ ನಡೆಸಿರುವುದರಿಂದಾಗಿ  ಮಂಜೇಶ್ವರ ಪೊಲೀಸರಿಗೆ ಈ ಪ್ರಕರಣವನ್ನು ಹಸ್ತಾಂತರಿಸಲಾಗಿದೆ ಎಂದು ಮಲಯಾಳಂ ಅಂತರ್ಜಾಲ ಮಾಧ್ಯಮವೊಂದು ವರದಿ ಮಾಡಿದೆ.

ಇನ್ನಷ್ಟು ಸುದ್ದಿಗಳು…

ಹೃದಯ ವಿದ್ರಾವಕ ಘಟನೆ: ವಾಕಿಂಗ್ ಗೆ ಹೋಗಿದ್ದ ತಾಯಿ ಮಗ ಇಬ್ಬರೂ ಹೊಳೆಗೆ ಬಿದ್ದು ದಾರುಣ ಸಾವು

ಆನ್ ಲೈನ್ ಗೆಳೆಯನ ಭೇಟಿಗೆ ತೆರಳಿದ ಯುವತಿಗೆ ಡ್ರಗ್ಸ್ ನೀಡಿ, ಐದು ಮಂದಿಯಿಂದ ಸಾಮೂಹಿಕ ಅತ್ಯಾಚಾರ!

ದೇವಸ್ಥಾನ ತೆರವು: ಹಿಂದೂ ಭಾವನೆಗಳ ವಿರುದ್ಧದ ಕೃತ್ಯ ಎಂದ ಸಿದ್ದರಾಮಯ್ಯ

ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ | ನಟ ಚೇತನ್

ವಿಧಾನಸಭೆಯ ಅಧಿವೇಶನದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಚರ್ಚಿಸಿ ಹಿಂಪಡೆಯದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ: ಕ್ಯಾಂಪಸ್ ಫ್ರಂಟ್

33 ತಾಸುಗಳ ಜೀವನ್ಮರಣ ಹೋರಾಟದ ಬಳಿಕ ಸಾವಿಗೀಡಾದ ಅತ್ಯಾಚಾರ ಸಂತ್ರಸ್ತೆ!

 

ಇತ್ತೀಚಿನ ಸುದ್ದಿ