ಪೆಟ್ರೋಲ್, ಡೀಸೆಲ್ ಗೆ ನೀರು ಬೆರಕೆ | ಪೆಟ್ರೋಲ್ ಬಂಕ್ ಮಾಲಿಕನ ವಿರುದ್ಧ ಗ್ರಾಹಕರಿಂದ ತೀವ್ರ ಆಕ್ರೋಶ - Mahanayaka

ಪೆಟ್ರೋಲ್, ಡೀಸೆಲ್ ಗೆ ನೀರು ಬೆರಕೆ | ಪೆಟ್ರೋಲ್ ಬಂಕ್ ಮಾಲಿಕನ ವಿರುದ್ಧ ಗ್ರಾಹಕರಿಂದ ತೀವ್ರ ಆಕ್ರೋಶ

petrol diesel
24/09/2021

ಬಾಗಲಕೋಟೆ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಒಂದೆಡೆ ಜನರು ತತ್ತರಿಸಿದ್ದರೆ, ಇದೀಗ ಕಾಸ್ಟ್ಲೀ ಪೆಟ್ರೋಲ್, ಡೀಸೆಲ್ ಗೂ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವ ಘಟನೆ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಪೆಟ್ರೋಲ್ ಬಂಕ್ ವೊಂದರಲ್ಲಿ ನಡೆದಿದೆ.

ಇದೀಗ ಈ ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕರು  ಪೆಟ್ರೋಲ್ ಬಂಕ್ ಎದುರು ನೆರೆದು ಮಾಲಿಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇಂಡಿಯನ್ ಆಯಿಲ್ ಆಫೀಸರ್ ನನ್ನು ತರಾಟೆಗೆತ್ತಿಕೊಂಡು ಅವರ ಕಾರು ತಡೆಹಿಡಿದು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 15 ದಿನಗಳಿಂದ ನೀರು ಮಿಶ್ರಿತ ಪೆಟ್ರೋಲ್, ಡೀಸೆಲ್ ಹಾಕಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.  ಜಮಖಂಡಿ ಮೂಲದ ಸದಾನಂದ ಪಾಟೀಲ್ ಒಡೆತನದ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಭಗವತಿ ಕ್ರಾಸ್ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ತುಪ್ಪ ಬೇಕಾ ತುಪ್ಪ ಎಂದು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದ ಮಹಿಳೆಯರು ಅರೆಸ್ಟ್ | ಅಷ್ಟಕ್ಕೂ ಇವರು ಮಾಡ್ತಿದ್ದದ್ದೇನು ಗೊತ್ತಾ?

ನ್ಯಾಯಾಲಯದ ಆವರಣದಲ್ಲಿ ಗುಂಡಿನ ದಾಳಿ: ಗ್ಯಾಂಗ್ ಸ್ಟಾರ್ ಜಿತೇಂದರ್ ಗೋಗಿ ಸಹಿತ ನಾಲ್ವರು ಸಾವು

ವಿಧಾನಮಂಡಲ ಅಧಿವೇಶನದಲ್ಲಿ  ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ

ಬೆಂಗಳೂರಿನಲ್ಲಿ ಮತ್ತೊಂದು ಭಾರೀ ಅಗ್ನಿ ದುರಂತ | ಕೆಮಿಕಲ್ ಫ್ಯಾಕ್ಟರಿಯ ಬಾಯ್ಲರ್ ಸ್ಫೋಟ

ಪತ್ನಿ ದಿನವೂ ಸ್ನಾನ ಮಾಡುತ್ತಿಲ್ಲ ಎಂದು ವಿಚ್ಛೇದನ ನೀಡಿದ ಪತಿ

ಪತ್ನಿಯ ಕುತ್ತಿಗೆಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ರಿಯಲ್ ಎಸ್ಟೇಟ್ ಉದ್ಯಮಿ!

ಇತ್ತೀಚಿನ ಸುದ್ದಿ