ವಾಹನ ಚಲಾಯಿಸುತ್ತಿರುವ ವೇಳೆ ಹೆಡ್ ಫೋನ್, ಬ್ಲೂಟೂತ್ ಬಳಸಿದರೆ ದಂಡ ಖಚಿತ - Mahanayaka
5:45 PM Thursday 11 - September 2025

ವಾಹನ ಚಲಾಯಿಸುತ್ತಿರುವ ವೇಳೆ ಹೆಡ್ ಫೋನ್, ಬ್ಲೂಟೂತ್ ಬಳಸಿದರೆ ದಂಡ ಖಚಿತ

driving headphones
02/10/2021

ಬೆಂಗಳೂರು: ವಾಹನ ಚಲಾಯಿಸುವ ವೇಳೆ ಹೆಡ್ ಫೋನ್ ಹಾಗೂ ಬ್ಲೂಟೂತ್ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ಈ ನಿಯಮಗಳನ್ನು ಉಲ್ಲಂಘಿಸಿದರೆ, ವಾಹನ ಚಾಲಕರು 1 ಸಾವಿರ ರೂಪಾಯಿಗಳವರೆಗೆ ದಂಡ ಪಾವತಿಸಬೇಕಾಗುತ್ತದೆ.


Provided by

ಮೋಟಾರು ವಾಹನ ಕಾಯ್ದೆಗಳ ಪ್ರಕಾರ ವಾಹನ ಚಾಲನೆ ಸಂದರ್ಭದಲ್ಲಿ ಗಮನ ಬೇರೆಡೆಗೆ ಸೆಳೆಯುವ ಉಪಕರಣಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಹಾಗಾಗಿ ವಾಹನ ಚಾಲನೆಯ ವೇಳೆ ಮೊಬೈಲ್,  ಹೆಡ್ ಫೋನ್, ಬ್ಲೂಟೂತ್ ಹಾಗೂ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿದರೆ ದಂಡ ವಿಧಿಸಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಇನ್ನೂ ನ್ಯಾವಿಗೇಷನ್ ಉದ್ದೇಶಕ್ಕಾಗಿ ಮಾತ್ರವೇ ಉಪಕರಣ ಬಳಕೆಗೆ ಅವಕಾಶವಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.  ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ಹೆಡ್ ಫೋನ್ ಮೂಲಕ ಮಾತನಾಡುವುದು,  ಹಾಡುಕೇಳುವುದು ಮೊದಲಾದ ಚಟುವಟಿಕೆ ಮಾಡುವುದರಿಂದ ಚಾಲಕರ ಗಮನ ಬೇರೆಡೆಗೆ ಸೆಳೆದು ಅಪಘಾತಗಳಾಗುತ್ತವೆ. ಇದರಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಕೂದಲು ಉದುರುವಿಕೆ, ಎದೆ ಉರಿ ಸೇರಿದಂತೆ ಹಲವು ರೋಗಗಳ ನಿವಾರಣೆ ಅಲೋವೆರಾ ಉತ್ತಮ

ಪರೀಕ್ಷೆ ಮುಗಿಸಿ ಹೊರ ಬಂದ ಸಹಪಾಠಿಯ ಕತ್ತು ಸೀಳಿ ಕೊಂದ ಪ್ರೇಮಿ!

ಮತ್ತೆ ಉದಯಿಸಲಿದೆ ಕೆಜೆಪಿ? | ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಾ?

BSPಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು | ಕಾರ್ಯಕರ್ತರ ಸಮಾವೇಶದಲ್ಲಿ ರಾಮ್ಜೀ ಗೌತಮ್ ಕರೆ

ನೆಹರೂ ಒಪ್ಪಿದ್ದ ಆರೆಸ್ಸೆಸ್ ನ್ನು  ಕಾಂಗ್ರೆಸ್ ಒಪ್ಪಿಕೊಳ್ಳಲಿ | ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲ್ಲ ಅನ್ನೋದು ಅಸತ್ಯ, ಭಟ್ಟಂಗಿತನ: ಕನ್ಹಯ್ಯ ಕುಮಾರ್ ವಿರುದ್ಧ ನಟ ಚೇತನ್ ಆಕ್ರೋಶ

 

ಇತ್ತೀಚಿನ ಸುದ್ದಿ