ಗರ್ಭಿಣಿ ಪತ್ನಿಗೆ ಮರ್ಮಾಂಗದಲ್ಲಿ ಸೋಂಕು ಇದೆ ಎಂದು ಆರೋಪಿಸಿ ತಲಾಖ್ ನೀಡಿದ ಪತಿ - Mahanayaka
12:38 PM Saturday 24 - January 2026

ಗರ್ಭಿಣಿ ಪತ್ನಿಗೆ ಮರ್ಮಾಂಗದಲ್ಲಿ ಸೋಂಕು ಇದೆ ಎಂದು ಆರೋಪಿಸಿ ತಲಾಖ್ ನೀಡಿದ ಪತಿ

08/11/2020

ಅಹ್ಮದಾಬಾದ್: ಗರ್ಭಿಣಿ ಪತ್ನಿಯ ಮರ್ಮಾಂಗದಲ್ಲಿ ಸೋಂಕು ಇದೆ ಎಂಬ ಕಾರಣವನ್ನಿಟ್ಟು ವ್ಯಕ್ತಿಯೊಬ್ಬ ಪತ್ನಿಗೆ ತಲಾಕ್ ನೀಡಿರುವ ಘಟನೆ  ಅಹ್ಮದಾಬಾದ್ ನಿಂದ ವರದಿಯಾಗಿದ್ದು, ಗುಜರಾತ್ ನ ಖೇಡಾ ಮೂಲದ ನಿಷ್ಕರುಣಿ ಪತಿ ಸಿದ್ದೀಕ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ.

ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಸಿದ್ದೀಕ್ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪತ್ನಿ 24 ವರ್ಷದ ಶಬ್ನಾ ಅವರನ್ನು ನಿಂದಿಸುತ್ತಲೇ ಬಂದಿದ್ದ. ಕಳೆದ ಜುಲೈಯಲ್ಲಿ ಶಬ್ನಾ ಅವರು ಗರ್ಭಿಣಿಯಾಗಿದ್ದರು. ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಲು ವೈದ್ಯರು ಹೇಳಿದ್ದರು. ಆದರೆ, ಆಕೆ ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಪತಿಯ ಕೃತ್ಯದಿಂದ ಆಕೆಯ ಆರೋಗ್ಯವೂ ಹದಗೆಟ್ಟಿತ್ತು.

ಒಂದು ತಿಂಗಳ ಹಿಂದೆ ಶಬ್ನಾ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು.  ತೀವ್ರ ಜ್ವರ, ರಕ್ತವಾಂತಿ ಮಾಡಲು ಅವರು ಆರಂಭಿಸಿದರು. ಮರ್ಮಾಂಗದ ಸೋಂಕು ಗಂಭೀರ ಸ್ಥಿತಿ ತಲುಪಿತ್ತು. ಈ ವಿಚಾರವೆಲ್ಲ ತಿಳಿದು ಕೂಡ ಆಸ್ಪತ್ರೆಗೆ ಬಂದಿದ್ದ ಸಿದ್ದೀಕ್ ಅಲ್ಲಿಂದ ತನ್ನ ಮನೆಗೆ ಹಿಂದಿರುಗಿದವನು ಮತ್ತೆ ಈ ಕಡೆಗೆ ತಿರುಗಿಯೂ ನೋಡಿರಲಿಲ್ಲ.

ನಾಲ್ಕು ದಿನದ ಬಳಿಕ ಪತ್ನಿ ಶಬ್ನಾ ಅವರನ್ನು ಪತಿಯ ಮನೆಗೆ ಪೋಷಕರು ಕರೆದುಕೊಂಡು ಹೋಗಿ ಬಿಟ್ಟರು. ಈ ಸಂದರ್ಭದಲ್ಲಿ  ಪತ್ನಿ ನಿದ್ದೆ ಮಾಡುತ್ತಿರುವಾಗ ಬಂದ ಸಿದ್ದೀಕ್ ಆಕೆಯ ಕುಟುಂಬಸ್ಥರನ್ನು ಮತ್ತು ಅವಮಾನಿಸಿದನು ಮತ್ತು ಮೂರು ಬಾರಿ ತಲಾಖ್ ಹೇಳಿ ಸಂಬಂಧವನ್ನು ಕಡಿದುಕೊಂಡಿದ್ದಾನೆ. ಜೊತೆಗೆ 1.5 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಇನ್ನೊಂದು ಯುವತಿಯ ಜೊತೆಗೆ ಮದುವೆಗೆ ಮುಂದಾಗಿದ್ದಾನೆ. ಘಟನೆ ಸಂಬಂಧ ಸಿದ್ದೀಕ್ ವಿರುದ್ಧ ಮಹಿಳಾ ವಿಚ್ಛೇದನಾ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸಿದ್ದಿಕ್ ವಿರುದ್ಧ ದೂರು ದಾಖಲಾಗಿದೆ.

ಇತ್ತೀಚಿನ ಸುದ್ದಿ