ಕಳ್ಳ ಎಂದು ಭಾವಿಸಿ ಆಟೋ ಚಾಲಕನ ಪುತ್ರನ ಬರ್ಬರ ಹತ್ಯೆ! - Mahanayaka
5:23 PM Thursday 16 - October 2025

ಕಳ್ಳ ಎಂದು ಭಾವಿಸಿ ಆಟೋ ಚಾಲಕನ ಪುತ್ರನ ಬರ್ಬರ ಹತ್ಯೆ!

maharashtra
10/10/2021

ಥಾಣೆ: ಯುವಕನೋರ್ವನನ್ನು ಕಳ್ಳಾ ಎಂದು ತಪ್ಪಾಗಿ ಭಾವಿಸಿದ ಜನರು ಆತನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದು, ಶನಿವಾರ ಮಧ್ಯರಾತ್ರಿ 1:30ರ ವೇಳೆಗೆ ಈ ಘಟನೆ ನಡೆದಿದೆ.


Provided by

ರಮೇಶ್ ಮುರಳಿ ಎಂಬ ಯುವಕನ್ನು ಕಳ್ಳ ಎಂದು ತಪ್ಪಾಗಿ ಭಾವಿಸಿದ ಜನರು ಕಬ್ಬಣದ ರಾಡ್, ಸರಳು, ಕೋಲಿನಿಂದ ಹೊಡೆದು ಪರಾರಿಯಾಗಿದ್ದಾರೆ. ಮೃತ ಯುವಕ ಇಲ್ಲಿನ ಆಟೋ ಚಾಲಕರೋರ್ವರ ಪುತ್ರನಾಗಿದ್ದು, ಇದನ್ನು ಅರಿಯದೇ ಸ್ಥಳೀಯ ನಿವಾಸಿಗಳು ಯುವಕನನ್ನು ಕಳ್ಳ ಎಂದು ಕೂಗಿ ಗುಂಪು ಸೇರಿಸಿ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ತೀವ್ರವಾದ ಹಲ್ಲೆಗಳಿಂದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಹತ್ಯೆ ಆರೋಪಿಗಳಲ್ಲಿ ಕೆಲವರ ಗುರುತು ಪತ್ತೆಯಾಗಿದೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

“ಧೈರ್ಯವಿದ್ದರೆ ಗುಡ್ಡೆ ಮೈದಾನಕ್ಕೆ ಬಾ” ಎಂದು ಕರೆದು ಸಹೋದರರಿಬ್ಬರ ಮೇಲೆ 20ಕ್ಕೂ ಅಧಿಕ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ!

ರೈಲಿನೊಳಗೆ ಪತಿಯ ಕಣ್ಣೆದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಡಕಾಯಿತರು

ಬಂಟ್ವಾಳ: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳ ಅರೆಸ್ಟ್

ಪೊಲೀಸರ ದುಷ್ಕೃತ್ಯದಿಂದ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಸಂತ್ರಸ್ತೆ

ಆರ್ಯನ್ ಖಾನ್ ಭಾಗವಹಿಸಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದ ಬಿಜೆಪಿ ನಾಯಕನ ಭಾವನನ್ನು ಬಿಡುಗಡೆ ಮಾಡಲಾಗಿದೆ | ಎನ್‌ ಸಿಪಿ ನಾಯಕ ಗಂಭೀರ ಆರೋಪ

ಕಲುಷಿತ ನೀರು ಸೇವಿಸಿ 25ಕ್ಕೂ ಅಧಿಕ ಮಂದಿ ಅಸ್ವಸ್ಥ

ರೈತರ ಮಾರಣಹೋಮ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಪುತ್ರ ಪೊಲೀಸರ ಮುಂದೆ ಹಾಜರು

ಇತ್ತೀಚಿನ ಸುದ್ದಿ