ತುಂಬಿ ತುಳುಕುತ್ತಿದ್ದ ಬಸ್ ಗೆ ಹತ್ತಿದ ಸಿಎಂನ್ನು ಕಂಡು ಪ್ರಯಾಣಿಕರಿಗೆ ಅಚ್ಚರಿ
ಚೆನ್ನೈ: ಹಲವು ವಿಭಿನ್ನ ಯೋಜನೆಗಳ ಮೂಲಕ ಗಮನ ಸೆಳೆಯುತ್ತಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟ್ಯಾಲಿನ್ ಅವರು, ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಸಾರ್ವಜನಿಕರ ಜೊತೆಗೆ ಪ್ರಯಾಣಿಸಿದ ಘಟನೆ ಚೆನ್ನೈ ನಲ್ಲಿ ನಡೆದಿದೆ.
ಚೆನ್ನೈನ ಕನ್ನಗಿ ನಗರ ಬಸ್ ನಿಲ್ದಾಣದಲ್ಲಿ ತುಂಬಿದ ಬಸ್ ಏರಿದ ಸ್ಟ್ಯಾಲಿನ್, ಪ್ರಯಾಣಿಕರನ್ನು ಮಾತನಾಡಿಸಿದ್ದಾರೆ. ಜೊತೆಗೆ ಮಹಿಳೆಯರಿಗೆ ತಮ್ಮ ಸರ್ಕಾರದ ವತಿಯಿಂದ ನೀಡಲಾಗಿರುವ ಉಚಿತ ಬಸ್ ಪಾಸ್ ಸೌಲಭ್ಯಗಳು ಹೇಗೆ ಕೆಲಸ ಮಾಡುತ್ತಿವೆ. ಇದರ ಸಾಧಕ—ಬಾಧಕಗಳೇನು ಎನ್ನುವುದನ್ನು ಸಾರ್ವಜನಿಕರಿಂದಲೇ ಮಾಹಿತಿ ಪಡೆದುಕೊಂಡರು.
ಏಕಾಏಕಿ ಬಿಳಿ ವಸ್ತ್ರ ಧರಿಸಿ ಬಸ್ ಏರಿದ ವ್ಯಕ್ತಿ ತಮಿಳುನಾಡಿನ ಮುಖ್ಯಮಂತ್ರಿ ಎನ್ನುವುದನ್ನು ಕ್ಷಣ ಕಾಲ ಪ್ರಯಾಣಿಕರು ನಂಬಲು ಸಾಧ್ಯವಾಗದೇ ಪ್ರಯಾಣಿಕರು ಅಚ್ಚರಿ ವ್ಯಕ್ತಪಡಿಸಿದರು. ಜೊತೆಗೆ ತನ್ನ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸುಮ್ಮನೆ ಕೂರದೇ, ಜನ ಸಾಮಾನ್ಯರ ಬಳಿಗೆ ಬಂದು ತನ್ನ ಯೋಜನೆ ಹೇಗಿದೆ ಎಂದು ಕೇಳಿರುವ ಎಂ.ಕೆ.ಸ್ಟ್ಯಾಲಿನ್ ಮಾದರಿಯಾಗಿದೆ.
ಅಂದ ಹಾಗೆ ಸ್ಟ್ಯಾಲಿನ್ ಅವರು ಬಸ್ ಗೆ ಹತ್ತುವ ವೇಳೆ ಮಾಧ್ಯಮಗಳಿಗೆ ಕೂಡ ಮಾಹಿತಿ ನೀಡಿರಲಿಲ್ಲ. ಯಾವುದೋ ಕೆಲಸದ ಮೇಲೆ ಬಂದಿದ್ದ ಅವರು ಏಕಾಏಕಿ ಬಸ್ ಏರಿದ್ದಾರೆ ಎಂದು ಹೇಳಲಾಗಿದೆ. ಆದರೆ ಸಾರ್ವಜನಿಕರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್
3 ಕೋಟಿ ತೆರಿಗೆ ಪಾವತಿಸಿ ಎಂದು ಬಡ ಆಟೋ ಚಾಲಕನಿಗೆ ಐಟಿ ಇಲಾಖೆ ನೋಟಿಸ್!
ಅಮೃತ ಭಾರತಿ ವಿದ್ಯಾಲಯ ಹೆಬ್ರಿಯ ಕನ್ನಡ ಶಿಕ್ಷಕ ಮಹೇಶ ಹೈಕಾಡಿ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಸಮಸ್ಯೆ ಪರಿಹಾರಕ್ಕೆ ಒಂದಾದ ಸಂಘಟನೆಗಳು: ಮಹತ್ವದ ಸಭೆ
ಹಿಂದೂ ಪದ್ಧತಿಯ ಆಚರಣೆಗಳೆಂದರೆ ಕಾಂಗ್ರೆಸ್ ಗೆ ಅಲರ್ಜಿ | ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ
ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮುಗಿಸುವುದೇ ಕುಮಾರಸ್ವಾಮಿಯ ಗುರಿ: ಜಮೀರ್ ಆರೋಪ
ರಾಜ್ಯ ಖಾಸಗಿ ಶಿಕ್ಷಕರ ಬಳಗದ ಸಂಸ್ಥಾಪಕ ಸಿ.ಎನ್.ನಾಗೇಶ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆ




























