ಮಕ್ಕಳನ್ನು ತಲೆ ಕೆಳಗಾಗಿಸಿ ನೇತು ಹಾಕಿ ಕ್ರೌರ್ಯ ಮೆರೆದ ತಂದೆ-ತಾಯಿ - Mahanayaka
3:17 PM Saturday 13 - September 2025

ಮಕ್ಕಳನ್ನು ತಲೆ ಕೆಳಗಾಗಿಸಿ ನೇತು ಹಾಕಿ ಕ್ರೌರ್ಯ ಮೆರೆದ ತಂದೆ–ತಾಯಿ

jaipura
25/10/2021

ಜೈಪುರ:  ತಮ್ಮ ಇಬ್ಬರು ಮಕ್ಕಳನ್ನು ಪೋಷಕರು ತಲೆ ಕೆಳಗಾಗಿಸಿ ಕಾಲಿಗೆ ಸರಪಳಿ ಬಿಗಿದು ನೇತು ಹಾಕಿ ಕ್ರೌರ್ಯ ಮರೆದ ಘಟನೆ  ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದ್ದು, 6 ಹಾಗೂ 10 ವರ್ಷದ ಮಕ್ಕಳನ್ನು ತಲೆ ಕೆಳಗಾಗಿಸಿ ನೇತು ಹಾಕಿ ವಿಕೃತಿ ಮೆರೆದಿದ್ದಾರೆ.


Provided by

ಮಕ್ಕಳನ್ನು ತಲೆ ಕೆಳಗಾಗಿ ನೇತು ಹಾಕಿ, ಮನೆಗೆ ಬೀಗ ಹಾಕಿ ಪೋಷಕರು ಕೆಲಸಕ್ಕೆ ತೆರಳಿದ್ದರು. ಮಕ್ಕಳ ಬೊಬ್ಬೆ ಕೇಳಿ ಸ್ಥಳೀಯರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ನೆರೆಹೊರೆಯವರು ಎನ್ ಜಿಒ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಈ ವೇಳೆ ಮಕ್ಕಳ ತಾಯಿಯು ನೆರೆಹೊರೆಯವರು ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಮಕ್ಕಳನ್ನು ನಾವು ಏನು ಬೇಕಾದರೂ ಮಾಡುತ್ತೇವೆ. ಕಿಡಿಗೇಡಿತನದಿಂದ ನಡೆದುಕೊಂಡರೆ ನಿಮಗೂ ಅದೇ ಗತಿ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇನ್ನೂ ಘಟನೆಯ ಬಳಿಕ  ಮಕ್ಕಳನ್ನು ಎನ್ ಜಿಒ ರಕ್ಷಿಸಿದ್ದು, ಪೋಷಕರನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಜಮೀರ್ ಹೆಗಲಿಗೆ ಬಂದೂಕು ಇರಿಸಿ ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ಮುಗಿಸಲು ಯತ್ನ: ಶ್ರೀನಾಥ್ ಪೂಜಾರಿ

ತುಂಬಿ ತುಳುಕುತ್ತಿದ್ದ ಬಸ್ ಗೆ ಹತ್ತಿದ ಸಿಎಂನ್ನು ಕಂಡು ಪ್ರಯಾಣಿಕರಿಗೆ ಅಚ್ಚರಿ

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

3 ಕೋಟಿ ತೆರಿಗೆ ಪಾವತಿಸಿ ಎಂದು ಬಡ ಆಟೋ ಚಾಲಕನಿಗೆ ಐಟಿ ಇಲಾಖೆ ನೋಟಿಸ್!

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಸಮಸ್ಯೆ ಪರಿಹಾರಕ್ಕೆ ಒಂದಾದ ಸಂಘಟನೆಗಳು: ಮಹತ್ವದ ಸಭೆ

ಹಿಂದೂ ಪದ್ಧತಿಯ ಆಚರಣೆಗಳೆಂದರೆ ಕಾಂಗ್ರೆಸ್ ಗೆ ಅಲರ್ಜಿ | ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಇತ್ತೀಚಿನ ಸುದ್ದಿ