ಕೋಕಾ ಕೋಲಾವನ್ನು ಟೇಬಲ್ ನಿಂದ ತೆಗೆಸಿದ ಡೇವಿಡ್​ ವಾರ್ನರ್ | ಕೋಕಾ ಕೋಲಾ ಕುಡಿಯಲು ಯೋಗ್ಯವಲ್ಲ? - Mahanayaka

ಕೋಕಾ ಕೋಲಾವನ್ನು ಟೇಬಲ್ ನಿಂದ ತೆಗೆಸಿದ ಡೇವಿಡ್​ ವಾರ್ನರ್ | ಕೋಕಾ ಕೋಲಾ ಕುಡಿಯಲು ಯೋಗ್ಯವಲ್ಲ?

david warner and coca cola
29/10/2021

ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮಾಧ್ಯಮಗೋಷ್ಠಿಯ ವೇಳೆ ಕೋಕಾ ಕೋಲಾ ಬಾಟಲಿಯನ್ನು ಪಕ್ಕಕ್ಕೆ ಸರಿಸಿದ ಘಟನೆ ಭಾರೀ ಟ್ರೆಂಡ್ ಆಗಿತ್ತು. ಇದೀಗ ಟಿ 20 ವರ್ಲ್ಡ್​ ಕಪ್​​ ಪಂದ್ಯಾವಳಿಯ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್ ಕೂಡ ಇದೇ ಹಾದಿಯನ್ನು ಹಿಡಿದಿದ್ದಾರೆ.

2021ರ ಟಿ 20 ವರ್ಲ್ಡ್​ ಕಪ್​​ ಪಂದ್ಯಾವಳಿಗೆ ಕೋಕಾ ಕೋಲಾ ಕಂಪೆನಿ ಸ್ಪಾನ್ಸರ್ ಆಗಿದೆ. ಪಂದ್ಯಕ್ಕೂ ಮೊದಲು ಹಾಗೂ ಪಂದ್ಯದ ನಂತರ ನಡೆಯುವ ಮಾಧ್ಯಮಗೋಷ್ಠಿಯ ವೇಳೆ ಆಟಗಾರರು ಆಸೀನರಾಗುವ ಕುರ್ಚಿ ಮೇಲೆ ಎರಡು ಕೋಕಾ ಕೋಲಾ ಬಾಟಲಿಯನ್ನು ಇಡಲಾಗುತ್ತದೆ. ಇದರ ಮುಖ್ಯ ಉದ್ದೇಶ, ಜನರನ್ನು ಕೋಕಾ ಕೋಲಾ ಕುಡಿಯುವಂತೆ ಪ್ರೇರೇಪಿಸುವುದು ಆಗಿದೆ.

ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ವಾರ್ನರ್,​​ ಮೇಜಿನ ಮೇಲಿದ್ದ ಕೋಕಾ ಕೋಲಾ ಬಾಟಲಿಗಳನ್ನು ಮೇಜಿನಿಂದ ತೆಗೆಸಿದ್ದಾರೆ.  ಜೊತೆಗೆ ಈ ಬಾಟಲಿಗಳನ್ನು ನಾನು ಇಲ್ಲಿಂದ ತೆಗೆಯಬಹುದೇ ಎಂದು ಪ್ರಶ್ನಿಸಿದ್ದಾರೆ.


Provided by

ಯುರೋ 2020 ಪಂದ್ಯಾವಳಿಯ ಸಮಯದಲ್ಲಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಕೋಕಾ ಕೋಲಾ ಬಾಟಲಿಯನ್ನು ಪಕ್ಕಕ್ಕೆ ಸರಿಸಿದ್ದರಿಂದಾಗಿ ಕಂಪೆನಿಗೆ ಭಾರೀ ನಷ್ಟವಾಗಿತ್ತು. ಇದೀಗ ವಾರ್ನರ್ ಕೂಡ ಅದೇ ಹಾದಿಯನ್ನು ಹಿಡಿಯುವ ಮೂಲಕ. ಕೋಕಾ ಕೋಲ ಕುಡಿಯಲು ಯೋಗ್ಯವಾದ ಪಾನೀಯವಲ್ಲ ಎನ್ನುವುದನ್ನು ಸಾರಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ