ನಾಲ್ವರಿಗೆ ದೃಷ್ಟಿ ನೀಡಿದ ಪುನೀತ್ ರಾಜ್ ಕುಮಾರ್ ಕಣ್ಣುಗಳು - Mahanayaka
12:37 PM Saturday 18 - October 2025

ನಾಲ್ವರಿಗೆ ದೃಷ್ಟಿ ನೀಡಿದ ಪುನೀತ್ ರಾಜ್ ಕುಮಾರ್ ಕಣ್ಣುಗಳು

puneeth rajkumar
01/11/2021

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣುಗಳ ಮೂಲಕ ನಾಲ್ವರಿಗೆ  ದೃಷ್ಟಿ ನೀಡಲಾಗಿದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


Provided by

ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳನ್ನು ನಾಲ್ವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸಾಮಾನ್ಯವಾಗಿ ಎರಡು ಕಣ್ಣುಗಳನ್ನು ಇಬ್ಬರಿಗೆ ಮಾತ್ರವೇ ಜೋಡಿಸಲಾಗುತ್ತದೆ. ಆದರೆ, ಪುನೀತ್ ಅವರ 2 ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ಡಾ.ಭುಜಂಗಶೆಟ್ಟಿ ತಿಳಿಸಿದರು.

ಕಾರ್ನಿಯಾಗಳನ್ನು ಎರಡು ಭಾಗ ಮಾಡಿ, ಮುಂಭಾಗದ ಕಣ್ಣು ಹಾಗೂ ಹಿಂಭಾಗದ ಆಳ ಪದರಗಳನ್ನು ಭಾಗ ಮಾಡಲಾಗಿತ್ತು. ಯಾರಿಗೆ ಮುಂಭಾಗದ ಕಾರ್ನಿಯಾ ಹಾನಿಯಾಗಿತ್ತೋ ಅವರಿಗೆ ಮುಂಭಾಗದ ಕಾರ್ನಿಯಾ ನೀಡಲಾಗಿದೆ. ಹಿಂಭಾಗದ ಆಳ ಪದರವನ್ನು ಬೇರೆಯವರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಒಟ್ಟು ನಾಲ್ಕು ಜನರಿಗೆ  ಶಸ್ತ್ರಚಿಕಿತ್ಸೆ ನೀಡಿ ಕಣ್ಣು ಜೋಡಿಸಲಾಗಿದೆ. ಕಣ್ಣು ಪಡೆದುಕೊಂಡವರೆಲ್ಲ ಕರ್ನಾಟಕದವರಾಗಿದ್ದು, ಓರ್ವಳು ಯುವತಿ ಹಾಗೂ ಮೂವರು ಪುರುಷರಿಗೆ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳನ್ನು ಯಶಸ್ವಿಯಾಗಿ ಜೋಡಿಸಲಾಗಿದೆ. ಎಲ್ಲರಿಗೂ ಉಚಿತ ಶಸ್ತ್ರ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ