ನವೆಂಬರ್ 8ರಿಂದ LKG, UKG ಶಾಲೆ ಆರಂಭ | ಪೋಷಕರು ಮಾಡಬೇಕಾದದ್ದು ಏನು? - Mahanayaka

ನವೆಂಬರ್ 8ರಿಂದ LKG, UKG ಶಾಲೆ ಆರಂಭ | ಪೋಷಕರು ಮಾಡಬೇಕಾದದ್ದು ಏನು?

lkg ukg
05/11/2021


Provided by

ಬೆಂಗಳೂರು:  ಕರ್ನಾಟಕದಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ನವೆಂಬರ್ 8ರಿಂದ ಎಲ್ ಕೆಜಿ(LKG), ಯುಕೆಜಿ(UKG) ಭೌತಿಕ ತರಗತಿ ಆರಂಭಕ್ಕೆ ಅವಕಾಶ ನೀಡಲಾಗಿದೆ.

ಎಲ್ ಕೆಜಿ ಹಾಗೂ ಯುಕೆಜಿ ತರಗತಿಗಳ ಆರಂಭಕ್ಕೆ ಸರ್ಕಾರ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಎಲ್ ಕೆಜಿ ಹಾಗೂ ಯುಕೆಜಿ ಕೇಂದ್ರವನ್ನು ಸ್ವಚ್ಛಗೊಳಿಸಬೇಕು. ರಾಸಾಯನಿಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು. ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ ಇರಬೇಕು. ಪೋಷಕರಿಗೂ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಆಗಿರಬೇಕು ಎಂದು ತಿಳಿಸಲಾಗಿದೆ.

ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ LKG, UKG ತರಗತಿಗಳು ಆರಂಭವಾಗಲಿದೆ. ಬೆಳಗ್ಗೆ 9:39 ರಿಂದ ಮಧ್ಯಾಹ್ನ 3:39 ರವರೆಗೆ ತರಗತಿ ನಡೆಸಬೇಕು ಎಂದು  ಸೂಚನೆ ನೀಡಲಾಗಿದೆ. ಕೊವಿಡ್ ಲಕ್ಷಣಗಳಿರುವ ಮಕ್ಕಳಿಗೆ ತರಗತಿಗೆ ಪ್ರವೇಶವಿಲ್ಲ ಎಂದು ತಿಳಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ