ಹೃದಯ ವಿದ್ರಾವಕ ಘಟನೆ: ಲಾರಿ ಹರಿದು 8 ವರ್ಷ ವಯಸ್ಸಿ ಬಾಲಕಿ ದಾರುಣ ಸಾವು! - Mahanayaka
11:20 PM Wednesday 15 - October 2025

ಹೃದಯ ವಿದ್ರಾವಕ ಘಟನೆ: ಲಾರಿ ಹರಿದು 8 ವರ್ಷ ವಯಸ್ಸಿ ಬಾಲಕಿ ದಾರುಣ ಸಾವು!

udupi news
14/11/2021

ಉಡುಪಿ: ಲಾರಿ ಹರಿದು ಎಂಟು ವರ್ಷ ವಯಸ್ಸಿನ ಬಾಲಕಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಶನಿವಾರ ಉಡುಪಿ ಜಿಲ್ಲೆಯ ಅಂಬಾಗಿಲು ಬಳಿಯಲ್ಲಿ ನಡೆದಿದ್ದು, ತಾಯಿಯ ಜೊತೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.


Provided by

ಎಂಟು ವರ್ಷ ವಯಸ್ಸಿನ ಪ್ರಣಮ್ಯ  ಮೃತ ಬಾಲಕಿಯಾಗಿದ್ದು,  ಸಂತೆಕಟ್ಟೆ ಬಳಿಯಿಂದ ಉಡುಪಿ ಕಡೆಗೆ ಬಾಲಕಿ ತನ್ನ ತಾಯಿಯ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದಳು ಎನ್ನಲಾಗಿದ್ದು, ಈ ವೇಳೆ ಹಿಂದಿನಿಂದ ಬಂದ ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ತಾಯಿ ಮಗಳು ಇಬ್ಬರೂ ರಸ್ತೆಗೆಸೆಯಲ್ಪಟ್ಟಿದ್ದಾರೆ.

ಈ ವೇಳೆ ತಾಯಿ ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದರೆ, ಪುತ್ರಿ ಪ್ರಣಮ್ಯ ಮೇಲೆ ಲಾರಿ ಹರಿದಿದ್ದು, ಪರಿಣಾಮವಾಗಿ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.  ಘಟನೆ ಸಂಬಂಧ ನಗರ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಮರಕ್ಕೆ ಡಿಕ್ಕಿ ಹೊಡೆದ ಪಿಕಪ್ ವಾಹನ: ಕ್ಯಾಟರಿಂಗ್ ಮುಗಿಸಿ ಬರುತ್ತಿದ್ದ  ಇಬ್ಬರು ಯುವಕರ ದಾರುಣ ಸಾವು!

ಸಿನಿಮಾ ಮಂದಿರದ ಹೊರಗಡೆ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಸಿದ ಶಿವರಾಜ್ ಕುಮಾರ್

ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಎಳೆದೊಯ್ದು ಕತ್ತುಕೊಯ್ದ | ಬೆಚ್ಚಿ ಬಿದ್ದ ಜನತೆ

ಪುನೀತ್ ಎಲ್ಲ ಚಿತ್ರಗಳಲ್ಲಿಯೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ | ರಮೇಶ್ ಜಾರಕಿಹೊಳಿ ಭಾವುಕ

ಗೋವು, ಸೆಗಣಿ, ಗೋಮೂತ್ರ ಆರ್ಥಿಕತೆಯನ್ನು ಬಲಪಡಿಸುತ್ತದೆ: ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ

ಇತ್ತೀಚಿನ ಸುದ್ದಿ