ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ: ಸರ್ಕಾರವನ್ನು ತರಾಟೆಗೆತ್ತಿಕೊಳ್ಳಲು ವಿಪಕ್ಷಗಳು ಸಜ್ಜು

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ(ನ.29) ಆರಂಭವಾಗಲಿದ್ದು, ಅಧಿವೇಶನಕ್ಕೂ ಮುನ್ನ ಲೋಕಸಭೆಯ ವ್ಯವಹಾರ ಸಲಹಾ ಸಮಿತಿ ಸಭೆ ಇಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನಿನ್ನೆ ಸರ್ವಪಕ್ಷ ಸಭೆ ನಡೆಸಿದ್ದರು. ಅದರಲ್ಲಿ 31 ರಾಜಕೀಯ ಪಕ್ಷಗಳಿಂದ 42 ಮುಖಂಡರು ಭಾಗಿಯಾಗಿದ್ದರು.ರೈತರ ಪ್ರತಿಭಟನೆಯಿಂದ ಹಿಡಿದು ಹಣದುಬ್ಬರದವರೆಗೆ ವಿವಿಧ ವಿಷಯಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ನಿರ್ಧರಿಸಿವೆ. ಈ ಮಧ್ಯೆ, ಸಂಸತ್ತು ಸುಗಮವಾಗಿ ನಡೆಯಲು ಅವಕಾಶ ನೀಡುವಂತೆ ಸರ್ಕಾರ ವಿರೋಧ ಪಕ್ಷಗಳನ್ನು ಒತ್ತಾಯಿಸಿದೆ.
ಮೊದಲನೆಯ ದಿನವಾದ ಇಂದು ಲೋಕಸಭೆಯಲ್ಲಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಚರ್ಚೆಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಬಳಿಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಕಾನೂನು ರದ್ದತಿ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಕಳೆದ ವಾರ ಅಂಗೀಕರಿಸಿದೆ. ಸಂಸತ್ತಿನ ಕೆಳಮನೆಯಲ್ಲಿ ಇಂದು ವಾಪಾಸಾತಿಗೆ ಅಂಗೀಕಾರ ಪಡೆದ ನಂತರ ಇಂದೇ ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಾಕ್ ನೀಡಿದ ಜಿಯೋ: ಏರ್ಟೆಲ್ ವೊಡಾಫೋನ್ ಬಳಿಕ ಜಿಯೋ ರೀಚಾರ್ಜ್ ದರ ಏರಿಕೆ
“ನಾನು ಅಧಿಕಾರದಲ್ಲಿರಲು ಬಯಸುವುದಿಲ್ಲ” ಎಂದ ಪ್ರಧಾನಿ ನರೇಂದ್ರ ಮೋದಿ!
ಸರಿಗಮಪ ವೇದಿಕೆಗೆ ಬೇಗ ಬಂದು ಸೇರಿಕೊಳ್ಳುತ್ತೇನೆ | ಕನ್ನಡಿಗರಿಗೆ ಸಂತಸದ ಸುದ್ದಿ ನೀಡಿದ ಹಂಸಲೇಖ
ಒಮಿಕ್ರಾನ್ ಭೀತಿಯ ನಡುವೆಯೇ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿಳಿದ ಇಬ್ಬರಿಗೆ ಕೊವಿಡ್ ದೃಢ!
ಖಾಲಿ ಪೇಪರ್ ಗೆ ಮೃತ ವೃದ್ಧೆಯ ಹೆಬ್ಬೆಟ್ಟು ಹಾಕಿಸಿಕೊಂಡ ಸಂಬಂಧಿಕರು!
ಕೊವಿಡ್ ಸೋಂಕು ಮತ್ತೆ ಉಲ್ಬಣ: ಹೊಸ ಮಾರ್ಗಸೂಚಿ ಬಿಡುಗಡೆ