ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ: ಮತಾಂತರಕ್ಕೆ ಯತ್ನಿಸಿರುವುದು ಪತ್ತೆ - Mahanayaka
10:15 AM Tuesday 14 - October 2025

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ: ಮತಾಂತರಕ್ಕೆ ಯತ್ನಿಸಿರುವುದು ಪತ್ತೆ

nagesh
11/12/2021

ಮಂಗಳೂರು: ನಗರದ ಜೆಪ್ಪು ಬಳಿಯಲ್ಲಿ ಇತ್ತೀಚೆಗೆ  ನಡೆದ ಒಂದೇ ಮನೆಯ ನಾಲ್ವರು ಆತ್ಮಹತ್ಯೆ ನಡೆಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಲಭ್ಯವಾಗಿದ್ದು, ಮೃತ ಮಹಿಳೆ ವಿಜಯಲಕ್ಷ್ಮೀಯನ್ನು ಮಹಿಳೆಯೊಬ್ಬರು ಮತಾಂತರ ನಡೆಸಲು ಯತ್ನಿಸಿರುವುದು ಪೊಲೀಸ್ ತನಿಖೆಯಿಂದ ಬಯಲಿಗೆ ಬಂದಿದೆ.


Provided by

ಪ್ರಕರಣದ ಸಂಬಂಧ ಇಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಮೃತ ವಿಜಯ ಲಕ್ಷ್ಮೀಯನ್ನು ಮುಸ್ಲಿಮ್ ಸಮುದಾಯದವರ ಜೊತೆಗೆ ಮದುವೆ ಮಾಡಿಸಲು ಯತ್ನಿಸಿರುವುದು ಸಾಂದರ್ಭಿಕ ದಾಖಲೆಗಳಿಂದ ದೃಢಗೊಂಡಿದೆ ಎಂದು ಅವರು ತಿಳಿಸಿದರು.

ಆತ್ಮಹತ್ಯೆ ಮಾಡಿಕೊಂಡಿರುವ ನಾಗೇಶ್ ಹಾಗೂ ಪತ್ನಿ ವಿಜಯಲಕ್ಷ್ಮೀಯ ನಡುವೆ  ಜಗಳ ನಡೆಯುತ್ತಿತ್ತು. ವಿಜಯಲಕ್ಷ್ಮೀಯು ನೂರ್ ಜಹಾನ್ ಎಂಬಾಕೆಯ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ನಾಗೇಶ್ ಕುಡಿದು ಬಂದು ಜಗಳವಾಡುತ್ತಿರುವುದರ ಬಗ್ಗೆ ನೂರ್ ಜಹಾನ್ ಗೆ ಹೇಳಿದಾಗ, ಆಕೆ ನೀನು ನಾಗೇಶ್ ಗೆ ಡಿವೋರ್ಸ್ ಕೊಡು ನಿನಗೆ ಮುಸ್ಲಿಮ್ ಸಮುದಾಯದವರ ಜೊತೆಗೆ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದಾಳೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಗೇಶ್ ಮತ್ತು ವಿಜಯಲಕ್ಷ್ಮೀ ನಡುವೆ ಜಗಳ ನಡೆದಿತ್ತು ಎಂದು ಅವರು ಹೇಳಿದರು.

ಆತ್ಮಹತ್ಯೆ ನಡೆದ ಹಿಂದಿನ ದಿನ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾಗೇಶ್ ನೂರ್ ಜಹಾನ್ ಮನೆಯ ಬಳಿಗೆ ಬಂದು ಜಗಳವಾಡಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ನಾಗೇಶ್ ಪತ್ನಿ ವಿಜಯಲಕ್ಷ್ಮೀ ಹಾಗೂ ತನ್ನಿಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದು, ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು  ಶಶಿಕುಮಾರ್ ಘಟನೆಯನ್ನು ವಿವರಿಸಿದರು.

ಆರೋಪಿ ನೂರ್ ಜಹಾನ್, ಮದುವೆ ಬ್ರೋಕರ್ ಆಗಿದ್ದಳು. ವಿಜಯಲಕ್ಷ್ಮೀ ತನ್ನ ಪತಿಗೆ ಡಿವೋರ್ಸ್ ನೀಡಬೇಕು ಎಂದು ನೂರ್ ಜಹಾನ್ ಗೆ ಕೇಳಿದ್ದು, ಹೀಗಾಗಿ ಆಕೆ, ಕೆಲವು ಅಡ್ವಕೇಟ್ ಗಳನ್ನು ಸಂಪರ್ಕಿಸಿದ್ದಳು. ಜೊತೆಗೆ ಮುಸ್ಲಿಮ್ ಸಮುದಾಯದವರ ಜೊತೆಗೆ ವಿವಾಹ ಮಾಡಿಸುವ ಭರವಸೆಯನ್ನು ನೀಡಿದ್ದಳು. ಇದಕ್ಕೆ ಸಂಬಂಧಿಸಿದಂತೆ ಬಂಧಿತ ಮಹಿಳೆ ನೂರ್ ಜಹಾನ್ ಮನೆಯಲ್ಲಿ ವಿಜಯಲಕ್ಷ್ಮೀಗೆ ಸಂಬಂಧಿಸಿದಂತೆ ಕೆಲವು ವಸ್ತುಗಳು ಹಾಗೂ ವಿಜಯಲಕ್ಷ್ಮೀಯ ಫೋಟೋ(ಮದುವೆ ಸಂಬಂಧ ಕುದುರಿಸಲು)ಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿ ನೂರ್ ಜಹಾನ್ ಳ ವಿರುದ್ಧ ಐಪಿಸಿ 306ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿಡಲಾಗಿದೆ ಎಂದು ಕಮಿಷನರ್ ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬುಡಕಟ್ಟು ಮಹಿಳೆಯರ ಜೊತೆ ಪ್ರಿಯಾಂಕಾ ಗಾಂಧಿ ನೃತ್ಯ: ನಾಚಿಕೆಯಾಗುವುದಿಲ್ಲವೇ? ಎಂದು ಕೇಳಿದ ಬಿಜೆಪಿ!

ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿರುವ ಸಿನಿಮಾಗಳ ಪಟ್ಟಿ ಬಿಡುಗಡೆ: ‘ಜೈ ಭೀಮ್’ಗೆ ಮೊದಲ ಸ್ಥಾನ

ಮಗುವನ್ನು ಹಿಡಿದುಕೊಂಡಿದ್ದ ವ್ಯಕ್ತಿಯ ಮೇಲೆ ಲಾಠಿ ಚಾರ್ಜ್: ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಠಿಣ ಕ್ರಮ

ಸಿಎಂ ಸ್ಥಾನದಿಂದ ಇಳಿಯುತ್ತಾರಾ ಬಸವರಾಜ್ ಬೊಮ್ಮಾಯಿ? | ಬಲವಾಗಿ ಕೇಳಿ ಬರುತ್ತಿರುವ ಚರ್ಚೆಗಳೇನು ಗೊತ್ತಾ?

ಕೇರಳದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ: ಕೋಳಿ, ಬಾತುಕೋಳಿ, ಮೊಟ್ಟೆಗಳನ್ನು ನಾಶಪಡಿಸಲು ಆದೇಶ

ಇತ್ತೀಚಿನ ಸುದ್ದಿ