15ರಿಂದ 18 ವರ್ಷದೊಳಗಿನವರಿಗೆ ಜನವರಿ 3ರಿಂದ ಲಸಿಕೆ ವಿತರಣೆ ಆರಂಭ | ಪ್ರಧಾನಿ ಮೋದಿ - Mahanayaka
7:28 AM Tuesday 9 - September 2025

15ರಿಂದ 18 ವರ್ಷದೊಳಗಿನವರಿಗೆ ಜನವರಿ 3ರಿಂದ ಲಸಿಕೆ ವಿತರಣೆ ಆರಂಭ | ಪ್ರಧಾನಿ ಮೋದಿ

modi
26/12/2021

ನವದೆಹಲಿ: 15ರಿಂದ 18 ವರ್ಷದ ಮಕ್ಕಳಿಗೆ ಜನವರಿ 3ರಿಂದ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು, ಇನ್ನೂ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ತಿಳಿಸಿದರು.


Provided by

ದೇಶವನ್ನು ಉದ್ದೇಶಿಸಿ ತುರ್ತು ಭಾಷಣ ಮಾಡಿದ ಪ್ರಧಾನಿ ಮೋದಿ, ಒಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದರು. ಶಾಲಾ, ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ವ್ಯಾಕ್ಸಿನ್‌ ನೀಡುತ್ತೇವೆ. ಲಸಿಕಾಕರಣ ಪ್ರಕ್ರಿಯೆ ಆರಂಭವಾಗಿ 11 ತಿಂಗಳಾಗಿದೆ. ಸಾಮೂಹಿಕ ಇಚ್ಛಾಶಕ್ತಿಯಿಂದ ಕೊರೊನಾ ವಿರುದ್ಧ ನಾವು ಹೋರಾಟ ಮುಂದುವರಿಸಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೊವಿಡ್, ಒಮಿಕ್ರಾನ್ ಬಗ್ಗೆ ಆತಂಕಬೇಡ, ಎಚ್ಚರಿಕೆ ಇರಲಿ. ದೇಶದಲ್ಲಿ ಈವರೆಗೆ 141 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಶೇ. 61ರಷ್ಟು ಯುವಕರಿಗೆ ಲಸಿಕೆ ನೀಡಲಾಗಿದೆ. ಜನರನ್ನು ಆರೋಗ್ಯವಾಗಿ ಇರಿಸಲು ನಿರಂತರ ಶ್ರಮಿಸುತ್ತಿದ್ದೇವೆ. ಲಸಿಕಾ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಮಿಕ್ರಾನ್ ಭೀತಿ:  ಡಿಸೆಂಬರ್ 28ರಿಂದ 10 ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕರ್ಫ್ಯೂ!

ಅತಿಥಿ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು: ಹೋರಾಟಕ್ಕೆ ಕ್ಯಾಂಪಸ್ ಫ್ರಂಟ್ ತೀರ್ಮಾನ

ಮುಸ್ಲಿಮರನ್ನು, ಕ್ರೈಸ್ತರನ್ನು ಘರ್ ವಾಪಸಿ ಮಾಡದೇ ಬೇರೆ ದಾರಿಯಿಲ್ಲ | ಸಂಸದ ತೇಜಸ್ವಿ ಸೂರ್ಯ

ಕಳೆದ 7 ವರ್ಷಗಳಿಂದ ಮೋದಿ ಸರ್ಕಾರ ‘ಉತ್ತಮ ಆಡಳಿತ’ ನೀಡುತ್ತಿದೆ | ಅಮಿತ್ ಶಾ

ರಾಜಸ್ಥಾನ: ಮಿಗ್​-21 ಫೈಟರ್​ ಜೆಟ್​ ಪತನ; ಪೈಲಟ್​ ವಿಂಗ್​ ಕಮಾಂಡರ್ ಹುತಾತ್ಮ​

ದೇವೇಗೌಡ ಪ್ರಧಾನಿಯಾಗಲು ಕಾಂಗ್ರೆಸ್ ಕಾರಣ: ಡಿ.ಕೆ. ಶಿವಕುಮಾರ್

ಇತ್ತೀಚಿನ ಸುದ್ದಿ