ಪೆಟ್ರೋಲ್ ಹಾಕುವ ಯುವಕನಿಗೆ ಪುರಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು - Mahanayaka
8:27 AM Thursday 16 - October 2025

ಪೆಟ್ರೋಲ್ ಹಾಕುವ ಯುವಕನಿಗೆ ಪುರಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು

parashuram
30/12/2021

ಯಾದಗಿರಿ: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು,  ಯಾದಗಿರಿ ಜಿಲ್ಲೆಯ ಕಕ್ಕೇರಾ ಪುರಸಭೆ ವಾರ್ಡ್ ನಂ6ರಲ್ಲಿ ಸ್ಪರ್ಧಿಸಿದ್ದ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುತ್ತಿದ್ದ ಯುವಕ ಪರಶುರಾಮ ಎಂಬವರ ಭರ್ಜರಿ ಗೆಲುವು ಸಾಧಿಸುವ ಮೂಲಕ ಸಾಧನೆ ಬರೆದಿದ್ದಾರೆ.


Provided by

ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪರಶುರಾಮ್ ಅವರು  ಇದೀಗ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಈ ಮೂಲಕ ರಾಜಕೀಯ ರಂಗಕ್ಕೆ ಎಂಟ್ರಿ ನೀಡಿದ್ದಾರೆ.  ಸುಮಾರು 50 ಸ್ಪರ್ಧಿಗಳನ್ನು ಹಿಂದಿಕ್ಕಿ ಪರಶುರಾಮ ಗೆಲುವು ಸಾಧಿಸಿದ್ದಾರೆ.

ಕಕ್ಕೇರಾ ಪುರಸಭೆಯಲ್ಲಿ ಶೇ 76.68 ಮತ್ತು ಕೆಂಭಾವಿ ಪುರಸಭೆಯಲ್ಲಿ ಶೇ 72.17 ಮತದಾನವಾಗಿತ್ತು. ಕಕ್ಕೇರಾ ‍ಪುರಸಭೆಗೆ 51 ಮಂದಿ ಸ್ಪರ್ಧಿಸಿದ್ದರು. ಈ 51 ಮಂದಿಯಲ್ಲಿ ಪೆಟ್ರೋಲ್ ಬಂಕ್ ನೌಕರ ಪರುಶುರಾಮ ಕೂಡ ಇದ್ದರು.  ಇದೀಗ ಪರಶುರಾಮ್ ಅವರು ಗೆಲುವಿನ ನಗೆ ಬೀರಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

9 ವಾಹನಗಳ ನಡುವೆ ಭೀಕರ ಸರಣಿ ಅಪಘಾತ: ಅಪಘಾತಕ್ಕೆ ಕಾರಣ ಏನು ಗೊತ್ತಾ?

ಗಾಂಧೀಜಿಯ ಅವಹೇಳನ: ಹಿಂದೂ ಸಂತ ಕಾಳಿ ಚರಣ್ ಅರೆಸ್ಟ್

ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: 6 ಉಗ್ರರ ಹತ್ಯೆ | ಯೋಧ ಹುತಾತ್ಮ, ಮೂವರಿಗೆ ಗಾಯ

ಗ್ರಾ.ಪಂ. ಉಪ ಚುನಾವಣೆ:  ಅಜ್ಜಿಯನ್ನು ಸೋಲಿಸಿದ ಮೊಮ್ಮಗಳು!

‘ಲಸಿಕೆ ಹಾಕಿಸಲ್ಲ’ ಎಂದು ಮರ ಏರಿ ಕುಳಿತ ಯುವಕ: ವಿಡಿಯೋ ವೈರಲ್

ಇತ್ತೀಚಿನ ಸುದ್ದಿ