“ಲಾಕ್​​ ಡೌನೋ, ಸೆಮಿ ಲಾಕ್​ ಡೌನೋ? ಸಭೆಯ ಬಳಿಕ ತೀರ್ಮಾನ” - Mahanayaka
12:37 PM Tuesday 16 - September 2025

“ಲಾಕ್​​ ಡೌನೋ, ಸೆಮಿ ಲಾಕ್​ ಡೌನೋ? ಸಭೆಯ ಬಳಿಕ ತೀರ್ಮಾನ”

cm bommai
04/01/2022

ಕಲಬುರಗಿ:  ವೇದಿಕೆಯಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ಅಶ್ವತ್ಥ್ ನಾರಾಯಣ ಕಿತ್ತಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ,  ಇದು ಕರ್ನಾಟಕದ ಸಂಸ್ಕೃತಿ  ಅಲ್ಲ  ಎಂದು ಹೇಳಿದರು.


Provided by

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ವೇದಿಕೆಯಲ್ಲಿ ನಡೆದ ಘಟನೆಯ ಬಗ್ಗೆ  ಬೇಸರ ವ್ಯಕ್ತಪಡಿಸಿದರು.  ಮಾತಿನಿಂದ ತಮ್ಮ ವಿಚಾರ ಹೇಳಬಹುದು. ಆದ್ರೆ ಈ ರೀತಿ ವರ್ತನೆ ಸರಿಯಲ್ಲಾ ಎಂದು ಅವರು ಹೇಳಿದರು.

ಕೊವಿಡ್ ಸಂಬಂಧ  ಪ್ರತಿಕ್ರಿಯಿಸಿದ ಅವರು, ಇಂದು ಸಾಯಂಕಾಲ ಕೋವಿಡ್ ಬಗ್ಗೆ ಸಭೆ ಮಾಡ್ತಿದ್ದೇವೆ. ಟಾಸ್ಕ್ ಪೋರ್ಸ್ ಕಮಿಟಿ ಸದಸ್ಯರು ಇರುತ್ತಾರೆ. ಕೊರೊನಾ ಮತ್ತೆ ಹೆಚ್ಚಳ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ ಅನೇಕ ಮಾರ್ಗದರ್ಶನ ನೀಡಿದೆ ಎಂದರು.

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸೋಂಕು ಹೆಚ್ಚಾಗಿದೆ. ಪಕ್ಕದ ರಾಜ್ಯದಲ್ಲಿ ಹೆಚ್ಚಾದಾಗ ನಮ್ಮ ರಾಜ್ಯದಲ್ಲಿ ಹೆಚ್ಚಾಗುತ್ತದೆ. ಇದರ ಬಗ್ಗೆ ಕಟ್ಟೆಚ್ಚರ‌ ವಹಿಸಬೇಕಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಮತ್ತು ಓಮಿಕ್ರಾನ್ ಹೆಚ್ಚಾಗುತ್ತಿದೆ. ಬರುವ ದಿನದಲ್ಲಿ‌ ಸುದೀರ್ಘ ಕ್ರಮ ಕೈಗೊಳ್ಳಬೇಕಾಗಿದೆ.  ಔಷದಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಾಲೆ ರಜೆ ಬಗ್ಗೆ ತಜ್ಞರು ಏನು ಹೇಳುತ್ತಾರೋ ಕೇಳಿ ತೀರ್ಮಾನ ಮಾಡುತ್ತೇವೆ.  ಲಾಕ್​​ ಡೌನ್, ಸೆಮಿ ಲಾಕ್​ ಡೌನ್ ಬಗ್ಗೆ ತಜ್ಞರ ಮೀಟಿಂಗ್ ನಂತರ ನಿರ್ಧಾರ ಮಾಡುತ್ತೇವೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರೈಲಿನಲ್ಲಿ ಪ್ರಯಾಣಿಕನಿಗೆ ಬೂಟುಗಾಲಿನಿಂದ ಒದ್ದ ಕೇರಳ ಪೊಲೀಸ್!

ರಾಜ್ಯದಲ್ಲಿ ಲಾಕ್ ಡೌನ್ ಆಗುತ್ತಾ? | ಬಣ್ಣದ ವರದಿಗಳ ನಡುವೆ ವಾಸ್ತವ ಸ್ಥಿತಿ ಏನು?

ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಕಾಂಗ್ರೆಸ್ ಮುಖಂಡೆಯ ಮೇಲೆ ಗುಂಡಿನ ದಾಳಿ

ಗರ್ಭಿಣಿ ಪತ್ನಿ ಮನೆಯಲ್ಲಿರುವಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಇನ್ಸ್ ಪೆಕ್ಟರ್

ಫೇಸ್ ಬುಕ್ ನಲ್ಲಿ ಪರಿಚಯ: 15 ವರ್ಷದ ಬಾಲಕನನ್ನು ಮದುವೆಯಾದ 22ರ ಯುವತಿ

ಇತ್ತೀಚಿನ ಸುದ್ದಿ