ಜೀವಂತವಾಗಿ ಬಂದಿದ್ದೇನೆ,  ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ ಎಂದ ಮೋದಿ | ಪಂಜಾಬ್  ನಲ್ಲಿ ನಡೆದದ್ದೇನು? - Mahanayaka

ಜೀವಂತವಾಗಿ ಬಂದಿದ್ದೇನೆ,  ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ ಎಂದ ಮೋದಿ | ಪಂಜಾಬ್  ನಲ್ಲಿ ನಡೆದದ್ದೇನು?

pm modi
06/01/2022


Provided by

ಪಂಜಾಬ್:  ಪ್ರಧಾನಿ ಮೋದಿ ಅವರ ಬೆಂಗಾವಲು ಕಾರನ್ನು ತಡೆದು ಪ್ರತಿಭಟಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆನ್ನಲಾಗಿರುವ ಹೇಳಿಕೆಯು ಇದೀಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪಂಜಾಬ್ ನ ಫಿರೋಜ್ ಪುರದಲ್ಲಿ 42,750 ಕೋಟಿ ರೂ ಮೊತ್ತದ ಬಹುಕೋಟಿ ರೂಪಾಯಿಗಳ ಯೋಜನೆಗಳ ಶಂಕುಸ್ಥಾಪನೆಗೆ ತೆರಳಿದ್ದರು.  ಫ್ಲೈಓವರ್ ಬಳಿಯೇ ಪ್ರಧಾನಿ ಬೆಂಗಾವಲು ಪಡೆ ವಾಹನವನ್ನು ಪ್ರತಿಭಟನಾಕಾರರು ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದರ ಪರಿಣಾಮ ಪ್ರಧಾನಿ ಅವರ ಕಾರು ಸುಮಾರು 15-20 ನಿಮಿಷಗಳ ಕಾಲ ನಿಲ್ಲುವಂತಾಗಿತ್ತು.  ಈ ಘಟನೆಯನ್ನು ಕೇಂದ್ರ ಗೃಹ ಸಚಿವಾಲಯ ಇದೊಂದು ಭದ್ರತಾ ಲೋಪ ಎಂದು ಆರೋಪಿಸಿದೆ.

ಇನ್ನೂ  ಫ್ಲೈಓವರ್ ನಲ್ಲಿ ಪ್ರತಿಭಟನಾಕಾರರು ಬೆಂಗಾವಲು ಪಡೆ ಕಾರನ್ನು ತಡೆದ ಘಟನೆಯಿಂದ ಅಸಮಾಧಾನಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಭಟಿಂಡಾ ಏರ್ ಪೋರ್ಟ್ ನಲ್ಲಿ, ನಾನು ಇಲ್ಲಿಯವರೆಗೆ ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ ಎಂದು ಏರ್ ಪೋರ್ಟ್ ಸಿಬ್ಬಂದಿ ಬಳಿ ಹೇಳಿರುವುದಾಗಿ ವರದಿ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರಧಾನಿ ಭದ್ರತೆಯಲ್ಲಿ ಭಾರೀ ಲೋಪ: ರಸ್ತೆ ಮಧ್ಯೆ ತಡೆದ ಪ್ರತಿಭಟನಾಕಾರರು!

50 ರೂಪಾಯಿ ಕಳೆದು ಹೋಗಿದೆ, ಸಿಕ್ಕಿದವರು ಇವರ ಬಳಿ ಕೊಡಿ!

ಭಾರತದಲ್ಲಿ ಒಮಿಕ್ರಾನ್ ಗೆ ಮೊದಲ ಬಲಿ!

ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ |  ನಜ್ಜುಗುಜ್ಜಾದ ಕಾರು

ಎಲ್ಲಾ ಕಡೆ ವೀಕೆಂಡ್ ಕರ್ಫ್ಯೂ ಯಾಕೆ? | ಸರ್ಕಾರದ ನಿರ್ಧಾರದ ಬಗ್ಗೆ ಸಚಿವ ಈಶ್ವರಪ್ಪ ಅಸಮಾಧಾನ

ಇತ್ತೀಚಿನ ಸುದ್ದಿ