ಚಲಿಸುತ್ತಿದ್ದ ಬಸ್ಸಿನಲ್ಲೇ  ಮೂರ್ಛೆ ಹೋದ ಚಾಲಕ: ಜನರ ಪ್ರಾಣ ಉಳಿಸಿದ ಮಹಿಳೆ - Mahanayaka

ಚಲಿಸುತ್ತಿದ್ದ ಬಸ್ಸಿನಲ್ಲೇ  ಮೂರ್ಛೆ ಹೋದ ಚಾಲಕ: ಜನರ ಪ್ರಾಣ ಉಳಿಸಿದ ಮಹಿಳೆ

bus
16/01/2022


Provided by

ಪುಣೆ: ಬಸ್ ಚಾಲನೆಯಲ್ಲಿರುವ ವೇಳೆಯಲ್ಲಿಯೇ ಬಸ್ ಚಾಲಕನಿಗೆ ಫಿಟ್ಸ್ ಬಂದು ಆತ ಅಸ್ವಸ್ಥನಾಗಿದ್ದು, ಈ ವೇಳೆ ಚಾಲಕನಿಲ್ಲದ ಬಸ್ ವೇಗವಾಗಿ ಮುನ್ನುಗ್ಗಿ ಇನ್ನೇನು ಅಪಘಾತ ಸಂಭವಿಸಬೇಕು ಅನ್ನೋವಷ್ಟರಲ್ಲಿಯೇ ಮಹಿಳೆಯೊಬ್ಬರು ಏಕಾಏಕಿ ಚಾಲಕನ ಸೀಟ್ ನಲ್ಲಿ ಕುಳಿತು ಬಸ್ ನ್ನು ನಿಯಂತ್ರಿಸುತ್ತಾರೆ.

ಇದು ಯಾವುದೋ ಸಿನಿಮಾದ ಸ್ಟೋರಿ ಅಲ್ಲ… ಪುಣೆಯಲ್ಲಿ ಮಹಿಳೆಯೊಬ್ಬರು ನಡೆಸಿದ ನಿಜವಾದ ಸಾಹಸ. ಪುಣೆ ಸಮೀಪದ ಶಿರೂರ್‌ ನಲ್ಲಿ ಇರುವ ಕೃಷಿ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ ಮಿನಿ ಬಸ್‌ನಲ್ಲಿ ವಾಪಸ್‌ ಬರುತ್ತಿದ್ದಾಗ ಚಲಿಸುತ್ತಿದ್ದ ಬಸ್‌ ಚಾಲಕನಿಗೆ ಫಿಟ್ಸ್‌ ಬಂದಿದ್ದು, ಈ ವೇಳೆ ಬಸ್ ನಿಯಂತ್ರಣ ಕಳೆದುಕೊಂಡು ಭೀಕರ ಅಪಘಾತವಾಗಲು ಕೆಲವೇ ನಿಮಿಷಗಳಿದ್ದವು. ಈ ವೇಳೆ ಬಸ್ ನಲ್ಲಿದ್ದ ಯೋಗಿತಾ ಸತವ್‌ ಎಂಬ ಮಹಿಳೆ ಧೈರ್ಯ ಮಾಡಿ ಚಾಲಕರ ಸೀಟಿನಲ್ಲಿ ಕುಳಿತು. ಬಸ್ ನ್ನು ನಿಯಂತ್ರಿಸಿದ್ದು, ಬಸ್ ನಲ್ಲಿದ್ದ ಜನರ ಪ್ರಾಣ ಕಾಪಾಡಿದ್ದಲ್ಲದೇ,  ಬಸ್ ನ್ನು ಆಸ್ಪತ್ರೆವರೆಗೆ ಚಲಾಯಿಸಿ, ಚಾಲಕ ಪ್ರಾಣವನ್ನೂ  ಕಾಪಾಡಿದ್ದಾರೆ.

ನನಗೆ ಕಾರು ಚಾಲನೆ ಮಾಡುವುದು ಗೊತ್ತಿತ್ತು. ಅದರ ಅನುಭವದಲ್ಲಿ ಬಸ್ ನಿಯಂತ್ರಿಸಿದೆ ಎಂದು ಯೋಗಿತಾ ಹೇಳಿದ್ದಾರೆ. ಸುಮಾರು 10 ಕಿ.ಮೀ.ವರೆಗೆ ಅವರು ಬಸ್ ಚಲಾಯಿಸಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

100 ಐಶಾರಾಮಿ ಕಾರುಗಳನ್ನು ಕದ್ದಿದ್ದ ಕಳ್ಳ ಕೊನೆಗೂ ಸಿಕ್ಕಿ ಬಿದ್ದ!

ಇನ್ಮುಂದೆ ಜ.26ರ ಬದಲಿಗೆ ಜ.23ರಿಂದ ಗಣರಾಜ್ಯೋತ್ಸವ ಆಚರಣೆ

ಕೇಂದ್ರ ಗಣರಾಜ್ಯೋತ್ಸವ ಸಮಿತಿಯಿಂದ ನಾರಾಯಣ ಗುರುಗಳ ಚಿತ್ರದ ಸ್ತಬ್ಧಚಿತ್ರ ತಿರಸ್ಕಾರ: ಎಚ್‌ಡಿಕೆ ಆಕ್ರೋಶ

ಸಮಾಜವಾದಿ ಪಾರ್ಟಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಭೀಮ್ ಆರ್ಮಿ

ವೈದ್ಯಕೀಯ ಚಿಕಿತ್ಸೆಗಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅಮೆರಿಕಕ್ಕೆ

ಇತ್ತೀಚಿನ ಸುದ್ದಿ