ಶ್ರೀರಂಗಪಟ್ಟಣ ಮಸೀದಿ ಕುರಿತು ವಿವಾದಾತ್ಮಕ ಹೇಳಿಕೆ: ರಿಷಿಕುಮಾರ್ ಸ್ವಾಮೀಜಿ ಬಂಧನ - Mahanayaka

ಶ್ರೀರಂಗಪಟ್ಟಣ ಮಸೀದಿ ಕುರಿತು ವಿವಾದಾತ್ಮಕ ಹೇಳಿಕೆ: ರಿಷಿಕುಮಾರ್ ಸ್ವಾಮೀಜಿ ಬಂಧನ

swamijji
18/01/2022

ಮಂಡ್ಯ: ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಒಡೆಯಬೇಕು ಎಂದು ಹೇಳಿದ್ದ ಕಾಳಿ‌ಮಠದ ರಿಷಿಕುಮಾರ್ ಸ್ವಾಮೀಜಿ ಅವರನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂದೆ ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರಿನ ಕಾಳಿಮಠದಲ್ಲಿ ಸ್ವಾಮೀಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.


Provided by

ಬಾಬ್ರಿ‌ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಒಡೆಯಬೇಕು. ಈ‌ ಮಸೀದಿಯಲ್ಲಿ ಅದ್ಬುತವಾದ ಶಿಲೆಗಳಿದೆ. ಅದು ದೇವಸ್ಥಾನದ ಕಟ್ಟಡವಾಗಿದೆ. ಶ್ರೀರಂಗಪಟ್ಟಣದ ದೇವಾಸ್ಥಾನವನ್ನ ಮಸೀದಿ‌ ಮಾಡಿಕೊಂಡಿದ್ದಾರೆ. ಹಿಂದೂಗಳು ಜಾಗರೂಕರಾಗಿ. ಅತಿಬೇಗ ಒಡೆಯಬೇಕಾದ ಮಸೀದಿ ಇದು ಎಂದು ರಿಷಿಕುಮಾರ್ ಸ್ವಾಮೀಜಿ ವಿವಾದತ್ಮಕ ಹೇಳಿಕೆ ನೀಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಿಕ್ಕಮಗಳೂರಿನ ಮಠದಲ್ಲಿ ಸ್ವಾಮೀಜಿ ಅವರನ್ನು ಬಂಧಿಸಲಾಗಿದ್ದು, ಶ್ರೀರಂಗಪಟ್ಟಣ ಠಾಣೆಗೆ ಕರೆ ತಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

3 ಮಕ್ಕಳ ಸಾವು ಪ್ರಕರಣ: ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ; ಅಧಿಕಾರಿಗಳಿಂದ ಮಾಹಿತಿ

ದಾಳಿಂಬೆಯ ಸೇವನೆಯಿಂದ ಸಿಗಲಿದೆ ಅದ್ಭುತ ಪ್ರಯೋಜನಗಳು

ವೈದ್ಯನ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಲೂಟಿ

5ಜಿ ಸೇವೆ ವಾಯುಯಾನ ಬಿಕ್ಕಟ್ಟಿಗೆ ಕಾರಣವಾಗಬಹುದು: ಅಮೆರಿಕ ಏರ್ ​ಲೈನ್ಸ್​ ಕಂಪನಿ ಸಿಇಒಗಳ

ಎಚ್ಚರಿಕೆ

ಭಾರತದ ಈಶಾನ್ಯ ಭಾಗದಲ್ಲಿ ಕಂಪಿಸಿದ ಭೂಮಿ: ರಿಕ್ಟರ್​ ಮಾಪಕದಲ್ಲಿ 4.9 ತೀವ್ರತೆ ದಾಖಲು

 

ಇತ್ತೀಚಿನ ಸುದ್ದಿ