ಪತ್ನಿಯನ್ನು ಚುಡಾಯಿಸುತ್ತಿದ್ದ ಯುವಕನನ್ನು ಬರ್ಬರ ಹತ್ಯೆಗೈದ ಪತಿ - Mahanayaka

ಪತ್ನಿಯನ್ನು ಚುಡಾಯಿಸುತ್ತಿದ್ದ ಯುವಕನನ್ನು ಬರ್ಬರ ಹತ್ಯೆಗೈದ ಪತಿ

chikkaballapura
23/01/2022


Provided by

ಚಿಕ್ಕಬಳ್ಳಾಪುರ: ಪತ್ನಿಯನ್ನು ಪದೇಪದೆ ಚುಡಾಯಿಸಿದ ಕಾರಣ ಯುವಕನ್ನೊಬ್ಬನನ್ನು ಪತಿ ಬರ್ಬರವಾಗಿ ಕೊಲೆ ಮಾಡಿ ಸುಟ್ಟು ಹಾಕಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಂಬಾಲಹಳ್ಳಿಯಲ್ಲಿ ನಡೆದಿದೆ.

ಮುತ್ತಕದಹಳ್ಳಿ ಗ್ರಾಮದ ಶಂಕರ್ (28) ಕೊಲೆಯಾದ ವ್ಯಕ್ತಿ. ಹಲವು ತಿಂಗಳಿಂದ ಅಶೋಕ್ ಎಂಬಾತನ ಪತ್ನಿಯನ್ನು ಶಂಕರ್ ಪದೇಪದೆ ಚುಡಾಯಿಸುತ್ತಿದ್ದ.

ಶಂಕರ್‌ಗೆ ಸಾಕಷ್ಟು ಬಾರಿ ತಿಳಿ ಹೇಳಲಾಗಿದ್ದರೂ ತನ್ನ ಚಾಳಿ ಮುಂದುವರಿಸಿದ್ದ. ಇದರಿಂದ ಕೆರಳಿದ ಅಶೋಕ್ ಕಂಬಾಲಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಶಂಕರ್​ನನ್ನು ಕೊಲೆ ಮಾಡಿ ನಂತರ ಸುಟ್ಟು ಹಾಕಿದ್ದಾನೆ ಎನ್ನಲಾಗಿದೆ.

ಘಟನೆಗೆ ಸಂಬಂಧ ಮಂಚೇನಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರ; ಆರೋಪಿಯ ಬಂಧನ

ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ: ಸ್ಥಳದಲ್ಲೇ ಸವಾರ ಸಾವು

ಸಿದ್ದರಾಮಯ್ಯ ಸ್ವಯಂ ಘೋಷಿತ ಸಂವಿಧಾನ ಪಂಡಿತ: ಹೆಚ್​​.ಡಿ ಕುಮಾರಸ್ವಾಮಿ

ಪ್ಲಾಸ್ಟಿಕ್‌ ಅಂಗಡಿಗಳು ಬೆಂಕಿಗೆ ಆಹುತಿ: ಇಬ್ಬರು ಸಜೀವ ದಹನ

ರಸ್ತೆ ಅಪಘಾತಕ್ಕೆ ಕರ್ತವ್ಯ ನಿರತ ಅರಣ್ಯಾಧಿಕಾರಿ ಸಾವು

ಇತ್ತೀಚಿನ ಸುದ್ದಿ