ಫುಟ್‌ ಬಾಲ್ ಪಂದ್ಯ ವೀಕ್ಷಿಸಲು ನೂಕು ನುಗ್ಗಲು: ಕಾಲ್ತುಳಿತದಲ್ಲಿ 6 ಸಾವು - Mahanayaka

ಫುಟ್‌ ಬಾಲ್ ಪಂದ್ಯ ವೀಕ್ಷಿಸಲು ನೂಕು ನುಗ್ಗಲು: ಕಾಲ್ತುಳಿತದಲ್ಲಿ 6 ಸಾವು

africa
25/01/2022


Provided by

ಆಫ್ರಿಕಾ: ಆಫ್ರಿಕಾ ಖಂಡದ ಅಗ್ರ ಫುಟ್‌ ಬಾಲ್ ಪಂದ್ಯಾವಳಿಯ ಪಂದ್ಯವನ್ನು ಆಯೋಜಿಸಿದ್ದ ಕೆಮರೂನ್ ದೇಶದ ರಾಜಧಾನಿ ಯೌಂಡೆಯ ಕ್ರೀಡಾಂಗಣದ ಹೊರಗೆ ಸಂಭವಿಸಿದ ನೂಕು ನುಗ್ಗಲಿನಿಂದ ಆದ ಕಾಲ್ತುಳಿತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಕೆಮರೂನ್‌ನ ಗವರ್ನರ್ ನಾಸೆರಿ ಪಾಲ್ ಬಿಯಾ ಹೇಳಿದ್ದಾರೆ. ಸದ್ಯ ನಾವು ಒಟ್ಟು ಸಾವು ನೋವುಗಳ ಸಂಖ್ಯೆಯನ್ನು ನೀಡುವ ಸ್ಥಿತಿಯಲ್ಲಿಲ್ಲಎಂದು ಅವರು ಹೇಳಿದ್ದಾರೆ.

ಆಫ್ರಿಕನ್ ಕಪ್ ಆಫ್ ನೇಷನ್ಸ್‌ನ ಪಂದ್ಯಾವಳಿಯ ಕೊನೆಯ ನಾಕೌಟ್ ಪಂದ್ಯದಲ್ಲಿ ಆತಿಥೇಯ ಕೊಮೊರೊಸ್ ತಂಡವು ಆಡುವುದನ್ನು ಕಣ್ತುಂಬಿಸಿಕೊಳ್ಳಲು ಅಧಿಕ ಪ್ರಮಾಣದ ಜನ ಸಮೂಹವು ರಾಜಧಾನಿ ಯೌಂಡೆಯಲ್ಲಿರುವ ಒಲೆಂಬೆ ಸ್ಟೇಡಿಯಂಗೆ ಪ್ರವೇಶ ಪಡೆಯಲು ಮುಂದಾಗಿತ್ತು. ಈ ಸಂದರ್ಭ ಸಂಭವಿಸಿದ ನೂಕು ನುಗ್ಗಲಿನಲ್ಲಿ ಹಲವರು ಸಾವಿಗೀಡಾಗಿದ್ದಾರೆ. 40 ಮಂದಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಮೀಪದ ಮೆಸ್ಸಾಸ್ಸಿ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ, ಗಾಯಾಳುಗಳನ್ನು ಪೊಲೀಸರು ಮತ್ತು ನಾಗರಿಕರು ಆಸ್ಪತ್ರೆಗೆ ಸಾಗಿಸಿದ್ದು, ಅವರೆಲ್ಲರಿಗೂ ಚಿಕಿತ್ಸೆ ನೀಡಲು ಆಸ್ಪತ್ರೆಯು ಸಮರ್ಥವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ನಾವು ಅವರನ್ನು ವಿಶೇಷ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ನರ್ಸ್ ಒಲಿಂಗ ಪ್ರುಡೆನ್ಸ್ ಹೇಳಿದ್ದಾರೆ.

ಕಾಲ್ತುಳಿತಕ್ಕೆ ಸಿಲುಕಿದವರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ಕ್ರೀಡಾಂಗಣದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕ್ರೀಡಾಂಗಣದ ಮೇಲ್ವಿಚಾರಕರು ಗೇಟ್‌ಗಳನ್ನು ಮುಚ್ಚಿ ಜನರನ್ನು ಒಳಗೆ ಬಿಡುವುದನ್ನು ನಿಲ್ಲಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸುಮಾರು 50 ಸಾವಿರ ಜನರು ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

‘ಸ್ಟುಪಿಡ್ ಸನ್ ಆಫ್​ ಎ..’ ಎಂದು ಪತ್ರಕರ್ತನಿಗೆ ನಿಂದಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಹುಡುಗಿಯ ವಿಚಾರಕ್ಕೆ ಒಂದೇ ಸಂಘಟನೆಯ ಎರಡು ಗುಂಪುಗಳ ನಡುವೆ ಹೊಡೆದಾಟ

ಬೈಕ್ ಸವಾರನನ್ನು ಉಳಿಸುವ ಭರದಲ್ಲಿ ಕಂದಕಕ್ಕೆ ಉರುಳಿದ ಬಸ್!

ಏಕಾಏಕಿ ನಿಯಂತ್ರಣ ಕಳೆದುಕೊಂಡ ಬಿಎಂಟಿಸಿ ಬಸ್ ಬೈಕ್‌ ಗೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ