ಸೆಲ್ಫಿ ತೆಗೆಯಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು - Mahanayaka
10:52 AM Thursday 16 - October 2025

ಸೆಲ್ಫಿ ತೆಗೆಯಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು

jalapatha
28/01/2022

ಮೈಸೂರು: ಪ್ರವಾಸಿ ತಾಣ ಹೊಗೇನಕಲ್‌ ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ಜಲಪಾತಕ್ಕೆ ಬಿದ್ದುಮೃತಪಟ್ಟಿರುವ ಘಟನೆ ವರದಿಯಾಗಿದೆ.


Provided by

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಉಮಾಶಂಕರ್‌ (19) ಮೃತಪಟ್ಟ ಯುವಕ.‌ ಈತ ಕೊಳ್ಳೆಗಾಲದ ಜೆಎಸ್‌ಎಸ್‌ ನಸಿಂಗ್‌ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಗುರುವಾರ ಸ್ನೇಹಿತರೊಂದಿಗೆ ಜಲಪಾತ ವೀಕ್ಷಣೆಗೆ ಹೊಗೇನಕಲ್‌ಗೆ ಬಂದಿದ್ದು, ನೀರು ಆಳಕ್ಕೆ ಧುಮುಕುವ ಸ್ಥಳಕ್ಕೆ ತೆರಳಿದ್ದ ಎನ್ನಲಾಗಿದೆ. ಇಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ 80 ಅಡಿಯಷ್ಟು ಆಳಕ್ಕೆ ಬಿದ್ದು ನಾಪತ್ತೆಯಾಗಿದ್ದಾನೆ.

ಗುರುವಾರ ರಾತ್ರಿಯವರೆಗೂ ಮೃತದೇಹ ಪತ್ತೆಯಾಗಿಲ್ಲ. ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಬಿದ್ದ ಸ್ಥಳದಿಂದ 50 ಮೀಟರ್‌ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಮಹದೇಶ್ವರ ಬೆಟ್ಟದ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೇಶದಲ್ಲಿ ಬುರ್ಖಾ ನಿಷೇಧಿಸಬೇಕು:ವಿವಾದಾತ್ಮಕ ಸ್ವಾಮೀಜಿ ರಿಷಿ ಕುಮಾರ್​

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಗ್ನಿ ಅವಘಡ

ಶೇಂದಿ ತೆಗೆಯುತ್ತಿದ್ದಾಗ ತಾಳೆ ಮರದಿಂದ ಬಿದ್ದು ವ್ಯಕ್ತಿ ಸಾವು

ಇಂದು ಬಿಹಾರ ಬಂದ್: ನಾಲ್ವರ ಬಂಧನ

ಶಾಸಕ ಎಂ.ಪಿ. ಕುಮಾರಸ್ವಾಮಿಯಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ

 

ಇತ್ತೀಚಿನ ಸುದ್ದಿ