ದೇಶದಲ್ಲೇ ಬಿಎಸ್ಪಿ ಎರಡನೇ ಶ್ರೀಮಂತ ಪಕ್ಷ, ಮೊದಲ ಸ್ಥಾನದಲ್ಲಿ ಬಿಜೆಪಿ - Mahanayaka

ದೇಶದಲ್ಲೇ ಬಿಎಸ್ಪಿ ಎರಡನೇ ಶ್ರೀಮಂತ ಪಕ್ಷ, ಮೊದಲ ಸ್ಥಾನದಲ್ಲಿ ಬಿಜೆಪಿ

bsp
29/01/2022


Provided by

ನವದೆಹಲಿ: 2019-20ರ ಹಣಕಾಸು ವರ್ಷದಲ್ಲಿ ವಿವಿಧ ರಾಜಕೀಯ ಪಕ್ಷಗಳ ಆಸ್ತಿ ಮತ್ತು ಸಾಲದ ವಿವರಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಹಿರಂಗಪಡಿಸಿದೆ. ಈ ಪೈಕಿ ಬಿಜೆಪಿ 4,847.78 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದು,  ಎಲ್ಲ ರಾಜಕೀಯ ಪಕ್ಷಗಳಿಗಿಂತ ಅತ್ಯಧಿಕವಾಗಿದೆ. 2ನೇ ಸ್ಥಾನದಲ್ಲಿ ಬಿಎಸ್ಪಿ ಇದ್ದು, 698.33 ಕೋಟಿ ರೂ. ಮತ್ತು 3ನೇ ಸ್ಥಾನದಲ್ಲಿರುವ ಕಾಂಗ್ರೆಸ್ 588.16 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿವೆ.

7 ರಾಷ್ಟ್ರೀಯ ಪಕ್ಷಗಳಿಂದ ಆಸ್ತಿ ಘೋಷಣೆ 2019-20ರಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಆಸ್ತಿ ಮತ್ತು ಹೊಣೆಗಾರಿಕೆಗಳ ವಿಶ್ಲೇಷಣೆಯ ಆಧಾರದ ಮೇಲೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ಈ ವರದಿಯನ್ನು ಸಿದ್ಧಪಡಿಸಿದೆ. ವಿಶ್ಲೇಷಣೆಯ ಪ್ರಕಾರ ಈ ಆರ್ಥಿಕ ವರ್ಷದಲ್ಲಿ 7 ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಆಸ್ತಿಯ ಮೌಲ್ಯವು 6,988.57 ಕೋಟಿ ರೂ. ಮತ್ತು 44 ಪ್ರಾದೇಶಿಕ ಪಕ್ಷಗಳ ಆಸ್ತಿ ಮೌಲ್ಯ 2,129.38 ಕೋಟಿ ರೂ. ಆಗಿದೆ.

7 ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ 4847.78 ಕೋಟಿ ರೂ. ಅಥವಾ ಶೇ.69.37ರಷ್ಟು, ಬಿಎಸ್ಪಿ 698.33 ಕೋಟಿ ರೂ. ಅಥವಾ ಶೇ.9.99ರಷ್ಟು ಮತ್ತು ಕಾಂಗ್ರೆಸ್ 588.16 ಕೋಟಿ ರೂ. ಅಥವಾ ಶೇ.8.42ರಷ್ಟು ಆಸ್ತಿ ಹೊಂದಿದೆ ಎಂದು ಎಡಿಆರ್ ವರದಿ ಹೇಳಿದೆ.

ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರ: ಸಮಾಜವಾದಿ ಪಕ್ಷ ರೂ. 434.219 ಕೋಟಿ
*ಟಿಆರ್‌ಎಸ್ ರೂ 256.01 ಕೋಟಿ
*ಎಐಎಡಿಎಂಕೆ ರೂ. 246.90 ಕೋಟಿ
*ಡಿಎಂಕೆ ರೂ. 162.425 ಕೋಟಿ
*ಶಿವಸೇನೆ ರೂ. 148.46 ಕೋಟಿ
*ಬಿಜೆಡಿ ರೂ. 25.18 ಕೋಟಿ
2019-20ರ ಆರ್ಥಿಕ ವರ್ಷದಲ್ಲಿ ಏಳು ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಹೊಣೆಗಾರಿಕೆ 134.93 ಕೋಟಿ ರೂ. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಾರ, 2019-20ನೇ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳು ಒಟ್ಟು 74.27 ಕೋಟಿ ರೂ. ಹೊಣೆಗಾರಿಕೆಯನ್ನು ಘೋಷಿಸಿವೆ. ರಾಷ್ಟ್ರೀಯ ಪಕ್ಷಗಳು ಸಾಲದ ಅಡಿಯಲ್ಲಿ 4.26 ಕೋಟಿ ರೂ. ಮತ್ತು ಇತರ ಹೊಣೆಗಾರಿಕೆಗಳ ಅಡಿಯಲ್ಲಿ 70.01 ಕೋಟಿ ರೂ. 2019-20 ರಲ್ಲಿ ಕಾಂಗ್ರೆಸ್ 49.55 ಕೋಟಿ (ಶೇ. 66.72) ಗರಿಷ್ಠ ಒಟ್ಟು ಹೊಣೆಗಾರಿಕೆಗಳನ್ನು ಘೋಷಿಸಿವೆ.

2019-20ನೇ ಹಣಕಾಸು ವರ್ಷದಲ್ಲಿ ಪ್ರಾದೇಶಿಕ ಪಕ್ಷಗಳ ಸಾಲ 30.29 ಕೋಟಿ ರೂ. ಮತ್ತು ಇತರ ಹೊಣೆಗಾರಿಕೆಗಳ ಅಡಿ 30.37 ಕೋಟಿ ರೂ.ಗಳನ್ನು ಘೋಷಿಸಿವೆ. ಟಿಡಿಪಿ ಗರಿಷ್ಠ ಒಟ್ಟು ಹೊಣೆಗಾರಿಕೆ 30.342 ಕೋಟಿ ರೂ. (ಶೇ. 50.02) ಎಂದು ಘೋಷಿಸಿದೆ. ಡಿಎಂಕೆ ರೂ 8.05 ಕೋಟಿ (ಶೇ. 13.27) ಹೊಣೆಗಾರಿಕೆಯನ್ನು ಘೋಷಿಸಿಕೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗುಂಡೇಟಿಗೆ ಕಾಡಾನೆ ಬಲಿ

ಸಮುದ್ರಕ್ಕೆ ಹಾರಿ ಯುವತಿ ಆತ್ಮಹತ್ಯೆಗೆ ಯತ್ನ: ರಕ್ಷಿಸಲು ಹೋದ ಸ್ನೇಹಿತನೇ ಸಮುದ್ರಪಾಲು

ಹಿಂದೂಗಳಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ: ಆಕ್ಷೇಪಾರ್ಹ ಬ್ಯಾನರ್ ಅಳವಡಿಕೆ

ಪಬ್‌ ಜಿ ಪ್ರಭಾವ: ಕುಟುಂಬದವರನ್ನೇ ಹತ್ಯೆ ಮಾಡಿದ ಬಾಲಕ

ಅಲೆಮಾರಿ ಸಮುದಾಯದ ವ್ಯಕ್ತಿಗೆ ಬೆದರಿಕೆ: ತಹಶೀಲ್ದಾರ್ ವಿರುದ್ಧ ಎಫ್ ​ಐ ಆರ್​ ದಾಖಲು

 

ಇತ್ತೀಚಿನ ಸುದ್ದಿ