ರಸ್ತೆಯ ಗುಂಡಿಗೆ ಮತ್ತೊಂದು ಬಲಿ: ನಿಲ್ಲದ ರಕ್ತದಾಹ - Mahanayaka
6:27 PM Thursday 16 - October 2025

ರಸ್ತೆಯ ಗುಂಡಿಗೆ ಮತ್ತೊಂದು ಬಲಿ: ನಿಲ್ಲದ ರಕ್ತದಾಹ

banglore
30/01/2022

ಬೆಂಗಳೂರು: ರಸ್ತೆಯ ಗುಂಡಿಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದ್ದು, ಸರ್ಕಾರದ ನಿರ್ಲಕ್ಷ್ಯತನದಿಂದಾಗಿ ಮತ್ತೊಮ್ಮೆ ಅಮಾಯಕ ಸಾರ್ವಜನಿಕರೊಬ್ಬರು ನೆತ್ತರು ಹರಿದಿದೆ.


Provided by

ಬೆಂಗಳೂರಿನ ಮಾಗಡಿ‌ ಮುಖ್ಯರಸ್ತೆಯ ಬ್ಯಾಡರಹಳ್ಳಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಯೊಬ್ಬರು ರಸ್ತೆ ಗುಂಡಿಯ ಪರಿಣಾಮ ಆಯತಪ್ಪಿ ರಸ್ತೆಗೆಸೆಯಲ್ಪಟ್ಟಿದ್ದು, ಅವರ ಮೇಲೆ ಬೊಲೆರೊ ವಾಹನ ಹತ್ತಿದ್ದು, ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಖಾಸಗಿ ಶಾಲೆಯ ಶಿಕ್ಷಕಿಯಾಗಿರುವ ಶರ್ಮಿಳಾ ಅವರು ತಮ್ಮ ಪತಿ ಪ್ರಕಾಶ್ ಜೊತೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಂಜನನಗರದ ಬಳಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಪ್ರಕಾಶ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ವಿಜಯನಗರ ಸಮೀಪದ ಮೂಡಲ ಪಾಳ್ಯದಿಂದ ಮಾದನಾಯಕನಹಳ್ಳಿಯಲ್ಲಿರುವ ಸಹೋದರನ ಮನೆಗೆ ಪತಿಯೊಂದಿಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಿಡಿಶಾಪ ಹಾಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಿಜವಾದ ಹಿಂದುತ್ವವಾದಿಗಳಾಗಿದ್ದರೆ ಜಿನ್ನಾನ ಕೊಲೆ ಮಾಡಬೇಕಿತ್ತು, ಗಾಂಧಿಯನ್ನಲ್ಲ | ಬಿ.ಕೆ.ಹರಿಪ್ರಸಾದ್

ನಡು ರಸ್ತೆಯಲ್ಲಿ ತನ್ನ ವಾಹನಕ್ಕೆ ತಾನೇ ಬೆಂಕಿ ಹಚ್ಚಿದ ಮಾಲಿಕ!

ಹಲಗೆ ಬಾರಿಸಿದ್ದಕ್ಕೆ ದಲಿತ ಯುವಕನಿಗೆ ಥಳಿಸಿ ಮೂತ್ರ ಕುಡಿಸಿದ ಯುವಕರು

ತಾಯಿ ಪೊಲೀಸರಿಗೆ ದೂರು ಕೊಡುತ್ತಾಳೆ ಎಂದು ಹೆದರಿ ವಿಷ ಕುಡಿದ ಮಗ!

ಮಗುಚಿ ಬಿದ್ದ 10 ಜನರು ಪ್ರಯಾಣಿಸುತ್ತಿದ್ದ ದೋಣಿ: ಇಬ್ಬರು ನೀರುಪಾಲು

 

ಇತ್ತೀಚಿನ ಸುದ್ದಿ