ಕಾರು ಅಡ್ಡಗಟ್ಟಿ ಕಾನ್‌ ಸ್ಟೆಬಲ್‌ ಮೇಲೆ ಹಲ್ಲೆ, ಕೊಲೆ ಬೆದರಿಕೆ - Mahanayaka

ಕಾರು ಅಡ್ಡಗಟ್ಟಿ ಕಾನ್‌ ಸ್ಟೆಬಲ್‌ ಮೇಲೆ ಹಲ್ಲೆ, ಕೊಲೆ ಬೆದರಿಕೆ

pede
31/01/2022


Provided by

ಬೇಲೂರು: ಪೊಲೀಸ್ ಕಾನ್‌ ಸ್ಟೆಬಲ್‌ ವೊಬ್ಬರನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಲಾಗಿರುವ ಘಟನೆ ಹಳೇಬೀಡು ರಸ್ತೆಯ ಎಂ.ಹುಣಸೇಕೆರೆ ಕೊಪ್ಪಲು ಗ್ರಾಮದ ಬಳಿ ನಡೆದಿದೆ.

ರಘು ಹಲ್ಲೆಗೊಳಗಾದ ಪೊಲೀಸ್‌ ಕಾನ್‌ ಸ್ಟೆಬಲ್‌. ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಹಳೇಬೀಡು ಸಮೀಪದ ನರಸೀಪುರ ಭೋವಿ ಕಾಲನಿಗೆ ಕಾರಿನಲ್ಲಿ ಹೋಗಿ ಬರುತ್ತಿದ್ದ ರಘು ಅವರನ್ನು ಹಳೇಬೀಡು ರಸ್ತೆಯ ಎಂ.ಹುಣಸೇಕೆರೆ ಕೊಪ್ಪಲು ಗ್ರಾಮದ ಬಳಿ 3 ರಿಂದ 4 ಬೈಕ್‌ ನ್ನು ನಿಲ್ಲಿಸಿಕೊಂಡಿದ್ದ ಆರೆಂಟು ಜನರಿದ್ದ ಗುಂಪು ಕಾರನ್ನು ಅಡ್ಟಗಟ್ಟಿ ನಿಲ್ಲಿಸಿ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು, ಪರ್ಸ್‌ ನಲ್ಲಿದ್ದ ಹಣವನ್ನೂ ದೋಚಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ: ಬಿಜೆಪಿ ಕಾರ್ಯಕರ್ತರಿಂದ ಪಕ್ಷದ ಕಚೇರಿ ಲೂಟಿ

ನಾಳೆ ಖಾಸಗೀಕರಣ ನೀತಿ ವಿರೋಧಿಸಿ ವಿದ್ಯುತ್‌ ನೌಕರರು ದೇಶವ್ಯಾಪಿ ಪ್ರತಿಭಟನೆ

ಭಾರೀ ಮಳೆಗೆ ಬ್ರೆಜಿಲ್ ತತ್ತರ: ಭೂಕುಸಿತಕ್ಕೆ ಕನಿಷ್ಠ 18 ಸಾವು

ಏಪ್ರಿಲ್‌ ಒಳಗೆ ತಾ.ಪಂ., ಜಿ.ಪಂ. ಚುನಾವಣೆ: ಸಚಿವ ಈಶ್ವರಪ್ಪ

ಮುಂದಿನ ಮುಖ್ಯಮಂತ್ರಿ ಯು.ಟಿ.ಖಾದರ್: ವಿಪಕ್ಷ ಉಪನಾಯಕನಾಗುತ್ತಿದ್ದಂತೆಯೇ ಹೊಸ ಚರ್ಚೆ

 

ಇತ್ತೀಚಿನ ಸುದ್ದಿ