ಶಾಲೆಗೆ ಹೋಗಿದ್ದ ಶಿಕ್ಷಕ ರಸ್ತೆ ಬದಿ ಅನುಮಾನಾಸ್ಪದ ಸಾವು - Mahanayaka

ಶಾಲೆಗೆ ಹೋಗಿದ್ದ ಶಿಕ್ಷಕ ರಸ್ತೆ ಬದಿ ಅನುಮಾನಾಸ್ಪದ ಸಾವು

davanagere
03/02/2022


Provided by

ದಾವಣಗೆರೆ: ಶಾಲೆಗೆ ಹೋಗಿದ್ದ ಶಿಕ್ಷಕನೊಬ್ಬ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಬನ್ನಹಟ್ಟಿ ಗ್ರಾಮದ ಬಳಿ ನಡೆದಿದೆ.

ಕುಟುಂಬದವರು ಹುಡುಕಾಡಿದಾಗ 27 ವರ್ಷದ ಮಾರುತಿ ನಾಯ್ಕ ಅವರ ಶವ ಚಿಕ್ಕಬನ್ನಹಟ್ಟಿ ರಸ್ತೆ ಬಳಿ ಪತ್ತೆಯಾಗಿದೆ. ಮೃತ ಶಿಕ್ಷಕ ಮಾರುತಿ ನಾಯ್ಕ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗಾಂಧಿ ನಗರ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ನಿನ್ನೆ ಬೆಳಗ್ಗೆ ಶಾಲೆಗೆ ತೆರಳಿದ ಈತ ರಾತ್ರಿಯಾದರೂ ಮನೆಗೆ ಬಾರದ ಬೆನ್ನಲ್ಲೇ ಕುಟುಂಬದವರು ಹುಡುಕಾಟ ನಡೆಸಿದ್ದರು.

ಇದರ ಬೆನ್ನಲ್ಲೇ ಇಂದು ಬೆಳಗ್ಗೆ ಬೈಕ್ ಒಂದು ಕಡೆ ಇನ್ನೊಂದು ಕಡೆ ಶವ ಪತ್ತೆಯಾಗಿದ್ದು, ಅಪರಿಚಿತ ವಾಹನ ಗುದ್ದಿಕೊಂಡು ಹೋಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಜಗಳೂರು ಠಾಣೆ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ‌.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಂದಿಯ ಖ್ಯಾತ ಕಿರುತೆರೆ ನಟಿಯ ಮೇಲೆ ಅತ್ಯಾಚಾರ: ದೂರು ದಾಖಲು

ಒಳ ಉಡುಪಿನಲ್ಲಿ ಜೈಲಿನೊಳಗೆ ಡಗ್ಸ್​ ಸಾಗಿಸುತ್ತಿದ್ದ ಅಧಿಕಾರಿ ಬಂಧನ

ಗೆಳತಿಯನ್ನು ಬ್ಯಾಗ್ ನಲ್ಲಿ ತುಂಬಿ ಹಾಸ್ಟೆಲ್ ಗೆ ಕೊಂಡೊಯ್ದ ಯುವಕ! | ವಿಡಿಯೋ ವೈರಲ್

ಮಗುವಿಗೆ ಹಾಲುಣಿಸುತ್ತಿದ್ದ ವೇಳೆಯೇ ತಾಯಿಗೆ ಡಿಕ್ಕಿ ಹೊಡೆದ ಕಾರು: ತಾಯಿ ಸಾವು

ಸಾವಿನಲ್ಲೂ ಹಲವರಿಗೆ ಜೀವ ಕೊಟ್ಟ 14 ವರ್ಷದ ಬಾಲಕ

 

ಇತ್ತೀಚಿನ ಸುದ್ದಿ