ಅನುಮಾನಗೊಂಡು ದ್ವಿಚಕ್ರ ವಾಹನ ನಿಲ್ಲಿಸಿದ ಪೊಲೀಸರು | ಅದರಲ್ಲಿದ್ದ ಚಿನ್ನಾಭರಣ ಎಷ್ಟು ಗೊತ್ತಾ? - Mahanayaka
9:16 PM Saturday 18 - October 2025

ಅನುಮಾನಗೊಂಡು ದ್ವಿಚಕ್ರ ವಾಹನ ನಿಲ್ಲಿಸಿದ ಪೊಲೀಸರು | ಅದರಲ್ಲಿದ್ದ ಚಿನ್ನಾಭರಣ ಎಷ್ಟು ಗೊತ್ತಾ?

21/11/2020

ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೇ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ನಗರ ಪಶ್ಚಿಮ ವಿಭಾಗದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


Provided by

ದಲಪತ್ ಸಿಂಗ್ ಹಾಗೂ ವಿಕಾಶ್ ಬಂಧಿತ ಆರೋಪಿಗಳಾಗಿದ್ದಾರೆ. ನಿನ್ನೆ ರಾತ್ರಿ ದೊಡ್ಡಪೇಟೆ ಸರ್ಕಲ್ ಬಳಿ ಗಸ್ತಿನಲ್ಲಿದ್ದ ಕಾನ್​ಸ್ಟೇಬಲ್​ಗಳಾದ ಹನುಮಂತ ಹಾಗೂ ಆನಂದ್ ಎಂಬವರು ಇವರಿಬ್ಬರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದಾಗ ಉತ್ತರಿಸಲು ತಡಾಬಡಾಯಿಸಿದ್ದಾರೆ. ಈ ವೇಳೆ ಅನುಮಾನಗೊಂಡು ಅವರು ಪರಿಶೀಲಿಸಿದಾಗ ಚಿನ್ನಾಭರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

ಆರೋಪಿಗಳ ಬಳಿಯಲ್ಲಿ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿರಲಿಲ್ಲ. ಆದರೆ, “ನರ್ಗತಪೇಟೆಯಲ್ಲಿರುವ ಎಸ್.ಎಸ್.ಜ್ಯೂವೆಲ್ಲರಿ ಶಾಪ್​ ಗೆ ಚಿನ್ನ ಸಾಗಣೆ ಮಾಡುತ್ತಿದ್ದೆವು” ಎಂದು ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಇತ್ತೀಚಿನ ಸುದ್ದಿ